ಹಾವೇರಿ : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಪ್ರಮುಖವಾಗಿ ಜಾರಿ ಮಾಡಿರುವ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಈಗಾಗಲೇ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣದಿಂದ ಅದೆಷ್ಟೋ ಮಹಿಳೆಯರು ಈ ಹಣ ಸದುಪಯೋಗಪಡಿಸಿಕೊಂಡು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ಹಾವೇರಿಯಲ್ಲಿ ಮಹಿಳೆಯರು ಅವರು ಗೃಹಲಕ್ಷ್ಮಿ ಯೋಜನೆ ಯಿಂದ ಬಂದಂತಹ ಹಣ ಕೂಡಿಟ್ಟು ಹಸು ಖರೀದಿಸಿದ್ದಾರೆ.
ಹೌದು ಆಭರಣದ ಬದಲು ಗೃಹಿಣಿ ಹಸು ಖರೀದಿಸಿ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕುಂದೂರು ಗ್ರಾಮದಲ್ಲಿ ವಿಶಾಲಾಕ್ಷಿ ಎನ್ನುವ ಮಹಿಳೆ ಇದೀಗ ಹಸು ಖರೀದಿಸಿದ್ದಾರೆ. ರಾಜ್ಯ ಸರ್ಕಾರ ನಮಗೆ ಊಟ ಕೊಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಕುಟುಂಬ ನಿರ್ವಹಣೆ ಕೂಡ ಗೃಹಲಕ್ಷ್ಮಿ ಯೋಜನೆಯಿಂದ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.