ಬಳ್ಳಾರಿ : ಕಳೆದ ವರ್ಷ ಅಧಿಕಾರ ಚುಕ್ಕಾಣಿ ಹಿಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಅರಳಿತಕ್ಕೆ ಬಂದ ಕೂಡಲೇ ಪ್ರಮುಖ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು. ಅದರಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಪ್ರಮುಖವಾಗಿವೆ. ಇದೀಗ ಗೃಹಲಕ್ಷ್ಮಿ ಯೋಜನೆಯಿಂದ ವೃದ್ಧೆಯೊಬ್ಬರು ಇಡೀ ಊರಿಗೆ ಊಟ ಹಾಕಿದ್ದು ಅಲ್ಲದೇ ನನಗೂ ಹೋಳಿಗೆ ಊಟ ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರಿನ ಕೃಷ್ಣ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅಧಿಕಾರಕ್ಕೆ ಬಂದರೆ ಹೆಚ್ಚು ಅಕ್ಕಿ ಕೊಡುತ್ತೇನೆ ಅಂದಿದ್ದೆ.ಆದರೆ ಕೇಂದ್ರ ಸರ್ಕಾರಕ್ಕೆ ಇದ್ದರೂ ಕೊಡಲಿಲ್ಲ. ಹೀಗಾಗಿ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲು 170 ರೂಪಾಯಿ ಕೊಡ್ತಾ ಇದ್ದೇವೆ.
ಬಳ್ಳಾರಿಯಲ್ಲಿ ಓರ್ವ ವೃದ್ಧೆಯನ್ನು ಮಾತನಾಡಿಸಿದಾಗ ಅವರು ಗೃಹಲಕ್ಷ್ಮಿ ಯೋಜನೆಯಿಂದ 20 ಸಾವಿರ ಬಂದಿದೆ. ಆ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿದ್ದೇನೆ ಅಂದರು. ನನಗೆ ಹೋಳಿಗೆ ಊಟ ತಂದು ಕೊಟ್ಟರು. ಅತ್ತೆ ಸೊಸೆ ನಡುವೆ ಜಗಳ ತಂದು ಇಡುತ್ತಾರೆ ಅಂತ ಬಿಜೆಪಿಯವರು ಟೀಕೆ ಮಾಡಿದ್ದರು. ಮತ್ತೋರ್ವ ಮಹಿಳೆ ಸೊಸೆಗೆ ಬಳೆ ಅಂಗಡಿ ಇಟ್ಟುಕೊಟ್ಟಿದ್ದಾರೆ. ಗ್ಯಾರಂಟಿಗಳು ನಿಲ್ಲಿಸಬೇಕು ಅಂತ ಬಿಜೆಪಿ ಅವರಿಗೆ ಹೊಟ್ಟೆ ಉರಿ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿಗೂ ಹಣ ಕೊಡುತ್ತಿದ್ದೇವೆ. ಈ ಬಾರಿಯ ಬಜೆಟ್ ನಲ್ಲಿ 53.9 ಕೋಟಿ ಹಣ ಮೀಸಲಿಟ್ಟಿದ್ದೇನೆ. ಇನ್ನೂ ಮೂರುವರೆ ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ಜನ ಮತ್ತೆ ಆಶೀರ್ವಾದ ಮಾಡಿದರೆ ಯೋಜನೆ ಮುಂದುವರಿಸುತ್ತೇವೆ. ಬಿಜೆಪಿಯವರು ಬಡವರು ಮಹಿಳೆಯರು ರೈತರು ಕಾರ್ಮಿಕರು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಿರೋಧಿಗಳು ಎಂದು ಕಿಡಿ ಕಾರಿದರು.