ಗದಗ : ಹೊಸಮನೆ ಕಟ್ಟಲು ಆದಂಪತಿಗಳು ಫೈನಾನ್ಸ್ ಸಂಸ್ಥೆಯಲ್ಲಿ ಮೂರು ಲಕ್ಷ ಸಾಲ ಪಡೆದಿದ್ದರು ಆದರೆ ಸಿಬ್ಬಂದಿಗಳ ಕಿರುಕುಳ ತಾಳದೆ ಇದೀಗ ಹೊಸ ಮನೆ ಬಿಟ್ಟು ಸ್ಲಂನಲ್ಲಿ ವಾಸಿಸುತ್ತಿದ್ದು, ಸತ್ತರೆ ಸಾಲ ಮನ್ನಾ ಆಗುತ್ತದೆ ಎಂದು ಸಿಬ್ಬಂದಿಗಳು ಹೇಳಿದಾಗ ಈ ವೇಳೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ.
ಹೌದು ಮನೆ ಕಟ್ಟಲು ದಂಪತಿ 3 ಲಕ್ಷ ಸಾಲ ಪಡೆದಿದ್ದು, ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಇದೀಗ ದಂಪತಿಗಳು ಊರೇ ತೊರೆದಿದ್ದಾರೆ. ಗದಗ ಜಿಲ್ಲೆಯಲ್ಲಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮುಂದುವರೆದಿದೆ. ಮನೆ ಕಟ್ಟೋದಕ್ಕೆ ಕುಟುಂಬ 3 ಲಕ್ಷ ಸಾಲ ಪಡೆದುಕೊಂಡಿತ್ತು. ಮೂರು ಲಕ್ಷ ಸಾಲಕ್ಕೆ ರೂ.30,000 ವಿಮೆ ಹಣ ಕಡಿತವಾಗಿತ್ತು.
1.30 ಹಣವನ್ನು ದಂಪತಿಗಳು ಪಾವತಿಸಿದ್ದರು. ಇದರಲ್ಲಿ 90,000 ಬಡ್ಡಿ ಮತ್ತು 40,000 ಅಸಲು ಅಂತಿರುವ ಫೈನಾನ್ಸ್, ಸಾಲಕ್ಕೆ ಮನೆ ಅಡಮಾನ ಅಂತ ಮನೆಯ ಮೇಲೆ ಬರಹ ಬರೆದಿದ್ದಾರೆ.ಹಾಗಾಗಿ ಹೊಸ ಮನೆ ಬಿಟ್ಟು ಸ್ಲಂ ನಲ್ಲಿ ದಂಪತಿಗಳು ಇದೀಗ ವಾಸಿಸುತ್ತಿದ್ದಾರೆ. ಸತ್ತರೆ ಸಾಲ ಮನ್ನಾ ಆಗುತ್ತದೆ ಎಂದು ಫೈನಾನ್ಸ್ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಬಡ ಮಹಿಳೆ ಒಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.