ನವದೆಹಲಿ: ಮುಂಬರುವ ಬಜೆಟ್ನಲ್ಲಿ, ಸರ್ಕಾರವು ತೆರಿಗೆದಾರರಿಗೆ ದೊಡ್ಡ ಉಡುಗೊರೆಯನ್ನು ಕೇಂದ್ರ ಸರ್ಕಾರ ನೀಡಬಹುದು ಎನ್ನಲಾಗಿದೆ. ಹೌದು, ಹೊಸ ತೆರಿಗೆ ವ್ಯವಸ್ಥೆಯನ್ನು ಆಕರ್ಷಕವಾಗಿಸಲು, ಅದರ ನಿಬಂಧನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಫೆಬ್ರವರಿ 1, 2023 ರಂದು ಮಂಡಿಸಲಾಗುವ ಸಾಮಾನ್ಯ ಬಜೆಟ್ನಲ್ಲಿ ಘೋಷಿಸಬಹುದು ಎನ್ನಲಾಗಿದ್ದು, ಈ ನಿಟ್ಟಿನಲ್ಲಿ, ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ, ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 2.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಬಹುದು ಹೇಳಲಾಗುತ್ತಿದೆ.
ಪ್ರಸ್ತುತ, ತೆರಿಗೆದಾರರು ವಾರ್ಷಿಕ 2.50 ಲಕ್ಷ ರೂ.ಗಳ ತೆರಿಗೆಗೆ ಒಳಪಡುವ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದ್ದರಿಂದ 2.50 ರಿಂದ 5 ಲಕ್ಷ ರೂಪಾಯಿಗಳ ಸ್ಲ್ಯಾಬ್ನಲ್ಲಿ, ತೆರಿಗೆದಾರರು ಶೇಕಡಾ 5 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫೆಬ್ರವರಿ 1, 2023 ರಂದು ಮಂಡಿಸಲಿರುವ ಬಜೆಟ್ನಲ್ಲಿ, ಹೊಸ ಆದಾಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲು ಪರಿಗಣಿಸಲಾಗುತ್ತಿದೆ. ಇದರಿಂದ ಹೊಸ ತೆರಿಗೆ ವ್ಯವಸ್ಥೆಯನ್ನು ತೆರಿಗೆದಾರರಲ್ಲಿ ಜನಪ್ರಿಯಗೊಳಿಸಬಹುದು. ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಿದರೆ, ತೆರಿಗೆದಾರರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ, ಇದರಿಂದ ಜನತೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬಹುದು.