ಬೆಂಗಳೂರು : ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಿಗ್ಗೆ ಗೃಹ ಸಚಿವರನ್ನು ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗೃಹ ಸಚಿವ ಪರಮೇಶ್ವರ ಅವರನ್ನು ಭೇಟಿಯಾದ ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಕುರಿತಂತೆ ಸಂಜೆ ಜಿ.ಪರಮೇಶ್ವರ್ ಅವರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ ಬೇಗೂರು ಬಳಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಸಹಕಾರ ಸಚಿವ ರಾಜಣ್ಣ ಭೇಟಿ ಮಾಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದಾಶಿವನಗರದ ಮನೆಗೆ ಸಂಜೆ 4:30ಕ್ಕೆ ಬರಲು ಸಚಿವರು ತಿಳಿಸಿದ್ದಾರೆ. ಸಚಿವರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ದೂರಿನ ಪ್ರತಿಯನ್ನು ಕೊಡುತ್ತೇನೆ. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಬಳಿಕ ನಾನು ಸ್ವಲ್ಪ ಬ್ಯುಸಿಯಾಗಿದ್ದೆ. ಬಿಡುವಿಲ್ಲದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ.
ಇನ್ನು ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಿಗ್ಗೆ ಗೃಹ ಸಚಿವರನ್ನು ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗೃಹ ಸಚಿವ ಪರಮೇಶ್ವರ ಅವರನ್ನು ಭೇಟಿಯಾದ ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಕುರಿತಂತೆ ಪತ್ರದ ಮುಖಾಂತರ ಲಿಖಿತ ರೂಪದಲ್ಲಿ ಹುಡುಕಿಕೊಂಡು ಹೋಗಿ ದೂರು ನೀಡುತ್ತೇನೆ ಎಂದಿದ್ದರು. ಹಾಗಾಗಿ ಬಿ ಪರಮೇಶ್ವರ ಅವರನ್ನು ಭೇಟಿಯಾದ ಕೇಂದ್ರ ರಾಜಣ್ಣ ಸಂಜೆ ಸದಾಶಿವನಾಗರದ ನಿವಾಸಕ್ಕೆ ಬನ್ನಿ ಎಂದು ತಿಳಿಸಿದ್ದಾರೆ ಎಂದು ಕೆ ಎನ್ ರಾಜಣ್ಣ ತಿಳಿಸಿದರು ಈ ಮೂಲಕ ಸಚಿವ ಕೆ.ಎನ್ ರಾಜಣ್ಣ ದೂರು ನೀಡುವುದು ಬಹುತೇಕ ಫಿಕ್ಸ್ ಆಗಿದೆ.