ಬೆಂಗಳೂರು : ಕನ್ನಡದ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯವಾದ ರಿಯಾಲಿಟಿ ಶೋ ಸದ್ಯಕ್ಕೆ ಬಿಗ್ ಬಾಸ್ ಸೀಸನ್ 11. ಈಗಾಗಲೇ ಬಿಗ್ ಬಾಸ್ ಸ್ಪರ್ಧಿ ಹಾಗೂ ಕನ್ನಡ ನಾಡಿನ ಎಲ್ಲ ಜನತೆಗೆ ಮೆಚ್ಚುಗೆಗೆ ಪಾತ್ರವಾದಂತಹ ಹನುಮಂತು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು ಫಿನಾಲೆಗೆ ಹೋಗಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ.
ಇದೆಲ್ಲದರ ಮಧ್ಯ ಮತ್ತೊಂದು ವಿಷಯ ಹರಿದಾಡುತ್ತಿದ್ದು, ಫಿನಾಲೆ ಇನ್ನು ಕೆಲವೇ ದಿನಗಳಿಷ್ಟೇ ಇವೆ. ಈ ನಡುವೆ ವಿಕಿಪಿಡಿಯಾ ಬಿಗ್ ಬಾಸ್ ಸೀಸನ್ -11ರ ವಿನ್ನರ್ ಯಾರೆಂದು ಫಿನಾಲೆಗೂ ಮೊದಲೇ ಹೆಸರು ರಿವೀಲ್ ಮಾಡಿ ಇಕ್ಕಟ್ಟಿಗೆ ಸಿಲುಕಿದೆ. ವಿಕಿಪಿಡಿಯಾದಲ್ಲಿ ಹನುಮಂತು ವಿನ್ನರ್, ತ್ರಿವಿಕ್ರಮ್ ರನ್ನರ್ ಅಪ್ ಎಂದು ವಿಕಿಪಿಡಿಯಾದಲ್ಲಿ ಹಾಕಲಾಗಿದೆ. ಫಿನಾಲೆಗೂ ಮುನ್ನ ಈ ರೀತಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ನೋಡಿ ಕೆಲ ವೀಕ್ಷಕರು ಖುಷ್ ಆಗಿದ್ದು, ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.
ಚೈತ್ರಾ ಆಚೆ ಹೋದ ಬಳಿಕ ಬಿಗ್ ಬಾಸ್ ಸೆಮಿ ಫೈನಲ್ ಆಟ ಶುರುವಾಗಿದೆ. ಈ ವಾರ ವಾರದ ಮಧ್ಯದಲ್ಲೇ ಒಬ್ಬರು ಸ್ಪರ್ಧಿ ಮನೆಯಿಂದ ಆಚೆ ಬರಲಿದ್ದಾರೆ. ಟಾಸ್ಕ್‌ನಲ್ಲಿ ಗೆಲ್ಲುವವರು ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾಗಲಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಟ್ರೋಫಿ ಮೇಲೆ ಹಲವು ಸ್ಪರ್ಧಿಗಳು ಕಣ್ಣಿಟ್ಟಿದ್ದಾರೆ.
ಆದರೆ ಟ್ರೋಫಿ ಒಬ್ಬರಿಗೆ ಮಾತ್ರ ಸಿಗಲಿದೆ. ಇದೆಲ್ಲದರ ಮಧ್ಯ ವಿಕಿಪೀಡಿಯ ಈ ಒಂದು ಎಡಬಟ್ಟು ಮಾಡಿದೆ. ಬಳಿಕ ಹೆಸರುಗಳನ್ನು ಅಳಿಸಿ ಹಾಕಿ ಟು ಬಿ ಅನೌನ್ಸ್ಡ್ ಎಂದು ಮತ್ತೆ ಬರೆಯಲಾಗಿದೆ. ಆದರೆ ಯಾವ ಮಾಹಿತಿ ಪಡೆದುಕೊಂಡು ವಿಕಿಪೀಡಿಯ ಈ ರೀತಿ ಹಾಕಿದೆ ಅನ್ನುವುದು ಇನ್ನೊಂದು ಸ್ಪಷ್ಟವಾಗಿಲ್ಲ. ಇನ್ನು 7 ಜನ ಸ್ಪರ್ಧಿಗಳು ಮನೆಯಲ್ಲಿ ಇದ್ದಾರೆ.