ಬೆಂಗಳೂರು : ತನ್ನ ಮಗಳಿಗಾಗಿ ಪತ್ನಿಯನ್ನು ನಿರ್ಮಾಪಕ ಹರ್ಷವರ್ಧನ್ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಚೈತ್ರ ಸಹೋದರಿ ದೂರು ನೀಡಿದ ಬೆನ್ನಲ್ಲೇ ಇದೀಗ ಹರ್ಷವರ್ಧನ್ ಹೆಂಡತಿ ಚೈತ್ರಾಳನ್ನು ತಂದು ಒಪ್ಪಿಸಿದ್ದಾನೆ.
ಹೌದು ಮಗಳಿಗಾಗಿ ತನ್ನ ಹೆಂಡತಿಯನ್ನು ಕಿಡ್ನ್ಯಾಪ್ ಮಾಡಿದ್ದ ಹರ್ಷವರ್ಧನ್ ನಟಿ ಚೈತ್ರಾಳಿಗೆ ತನ್ನ ಮಗು ನೀಡುವಂತೆ ಬೇಡಿಕೆ ಇಟ್ಟಿದ್ದನು ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಹೇಳಿಸಿ ಕಿಡ್ನ್ಯಾಪ್ ಮಾಡಿದ್ದ. ಬೆಂಗಳೂರಿನ ಮೂಲಕ ಕಿಡ್ನಾಪ್ ಮಾಡಿಸಿದ್ದಾನೆ. ಪ್ರೀತಿಸಿ ನಟಿ ಚೈತ್ರ ಮತ್ತು ಹರ್ಷವರ್ಧನ್ ಮದುವೆ ಆಗಿದ್ದರು.
ಮದುವೆಯ ಬಳಿಕ ಇಬ್ಬರ ನಡುವೆ ಕೌಟುಂಬಿಕ ಕಲಹ ನಡೆದಿತ್ತು. ಒಂದು ವರ್ಷದ ಮಗಳಿಗಾಗಿ ಪಟ್ಟು ಹಿಡಿದಿದ್ದಾನೆ. ಚೈತ್ರ ಜೊತೇನೆ ಮಗು ಇತ್ತು ಚೈತ್ರ ಸಹ ತಾಯಿ ಮನೆಯಲ್ಲಿ ಇದ್ದರು. ಈ ಕುರಿತು ಚೈತ್ರ ಸೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಹರ್ಷವರ್ಧನ್ ಮತ್ತು ಚೈತ್ರ ವಿಚಾರಣೆ ನಡೆಸಿದ್ದಾರೆ ವಿಚಾರಣೆ ವೇಳೆ ಕೌಟುಂಬಿಕ ಕಲಹ ಅಂತ ದಂಪತಿಗಳು ಒಪ್ಪಿಕೊಂಡಿದ್ದಾರೆ ಮಾತನಾಡಿ ಸರಿ ಮಾಡಿಕೊಳ್ಳುತ್ತೇವೆ ಅಂತ ದಂಪತಿಗಳು ತಿಳಿಸಿದ್ದಾರೆ.








