ಬೆಂಗಳೂರು : ಹೊಸ ವರ್ಷದ ಆರಂಭದಲ್ಲಿ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಇದೀಗ ಬಿಗ್ ಶಾಕ್ ನೀಡಿದೆ.ಸಾರಿಗೆ ಬಸ್ಗಳಲ್ಲಿ ಟಿಕೆಟ್ ದರ ಶೇಕಡ 15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ.
ಇನ್ನು ಈ ವಿಚಾರವಾಗಿ ರಾಜ್ಯದ ಜನರು ಆಕ್ರೋಶ ಹೊರ ಹಾಕಿದ್ದು, ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ ಒಂದು ಕಡೆಗೆ ಬಸ್ ನಲ್ಲಿ ಫ್ರೀ ಕೊಟ್ಟು ಇನ್ನೊಂದು ಕಡೆಗೆ ಕಿತ್ತುಕೊಳ್ಳುತ್ತಿದ್ದಾರೆ. 2 ರೂಪಾಯಿ ಫ್ರೀ ಕೊಟ್ಟು ರೂ.10 ಕಿತ್ತುಕೊಳ್ಳುತ್ತಿದ್ದಾರೆ ದರ ಏರಿಕೆ ನಿರ್ಧಾರ ಒಳ್ಳೆಯದಲ್ಲ ಎಂದು ಪ್ರಯಾಣಿಕರು ಕಿಡಿ ಕಾರುತ್ತಿದ್ದಾರೆ.
ಅದೇ ರೀತಿಯಾಗಿ ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಹೆಚ್ಚಳ ಮಾಡಬಾರದು. ಬಸ್ ನಲ್ಲಿ ಮಹಿಳೆಯರಿಗೆ ಅಷ್ಟೇ ಏಕೆ ಫ್ರೀ? ನಮಗೂ ಫ್ರೀ ಕೊಡಿ ಎಂದು ಪುರುಷ ಪ್ರಯಾಣಿಕರು ಸಹ ಇದೀಗ ಸರ್ಕಾರದ ಈ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ.
ಅದೇ ರೀತಿಯಾಗಿ ಮಂಗಳೂರಲ್ಲಿ ಕೂಡ ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಷ್ಟದ ಅವರೇನೋ ನಮ್ಮ ಮೇಲೆ ಹಾಕುತ್ತಿದ್ದಾರೆ. ಚಾಲಕರು ನಿರ್ವಾಹಕರಿಗೆ ವೇತನ ನೀಡಲು ಹಣವಿಲ್ಲ. ಹೀಗಾಗಿ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಿಸುತ್ತಿದೆ. ಸರ್ಕಾರದ ಈ ಕ್ರಮ ಸರಿಯಲ್ಲ ಎಂದು ಜನರು ಗರಂ ಆಗಿದ್ದಾರೆ. ಸಂಪುಟದ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.