ರಾಮನಗರ : ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದರು. ಇದೀಗ ಒಂದು ಅರ್ಜಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮುಡಾ ಪ್ರಕರಣವನ್ನು ಸಿಬಿಐಗೆ ಯಾಕೆ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣವನ್ನು ಯಾಕೆ CBI ಗೆ ಕೊಡುತ್ತಾರೆ? ಈಗಾಗಲೇ ಪ್ರಕರಣವನ್ನ ಎರಡು ಏಜೆನ್ಸಿ ತನಿಖೆ ಮಾಡುತ್ತಿವೆ.ಒಂದು ಲೋಕಾಯುಕ್ತ ಎರಡನೆಯದು ಇಡಿ ಸಂಸ್ಥೆ ತನಿಖೆ ಮಾಡುತ್ತೀಟವೆ. ಹೀಗಿರುವಾಗ ಮೂರನೇ ಏಜೆನ್ಸಿಗೆ ಪ್ರಕರಣವನ್ನು ಯಾಕೆ ಕೊಡುತ್ತಾರೆ? ಈಗಾಗಲೇ ನಾನು ಹೊಡೆದಾಡುತ್ತಿದ್ದೇನೆ ನನ್ನ ಮೇಲೆ ಹಾಕಿರುವ ಕೇಸ್ ಸರಿ ಇಲ್ಲ ಎಂದು ತಿಳಿಸಿದರು.