ಬೆಂಗಳೂರು : ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ದಾಖಲೆಯ 2026-27ನೇ ಸಾಲಿನ ಬಜೆಟ್ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಈ ಬಾರಿ 4.48 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹಲವು ನೂತನ ಯೋಜನೆಗಳನ್ನು ನೀಡಿದ್ದಾರೆ. ಹಾಗಾದ್ರೆ ಯಾವ ಜಿಲ್ಲೆಗೆ ಯಾವ ಯಾವ ಯೋಜನೆಗಳು ಮಂಜೂರಾಗಿವೆ, ಅದಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ, ಮುಂದಿನ ಗುರಿ ಏನು ಎಂಬ ಜಿಲ್ಲಾವಾರು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಜಿಲ್ಲಾವಾರು ಮತ್ತು ಪ್ರಾದೇಶಿಕವಾರು ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
1. ಬೆಂಗಳೂರು (ನಗರ ಮತ್ತು ಗ್ರಾಮಾಂತರ)
ಬೆಂಗಳೂರನ್ನು ವಿಶ್ವದ ಅತ್ಯುತ್ತಮ ನಗರವನ್ನಾಗಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
-
ಎರಡನೇ ವಿಮಾನ ನಿಲ್ದಾಣ: ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಸಮೀಕ್ಷೆ.
-
ರಸ್ತೆ ಮತ್ತು ಸುರಂಗ ಮಾರ್ಗ: ಹೆಬ್ಬಾಳ ಜಂಕ್ಷನ್‌ನಿಂದ ಎಚ್‌ಎಸ್‌ಆರ್ ಲೇಔಟ್‌ವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಅಭಿವೃದ್ಧಿಗೆ ₹17,780 ಕೋಟಿ.
-
ಸಾರ್ವಜನಿಕ ಸಾರಿಗೆ: ನಮ್ಮ ಮೆಟ್ರೋ ಯೋಜನೆಯ ವಿಸ್ತರಣೆ ಮತ್ತು ಹೊರವರ್ತುಲ ರಸ್ತೆ (ORR) ಅಭಿವೃದ್ಧಿಗೆ ₹450 ಕೋಟಿ.
-
ಕೆರೆ ತುಂಬಿಸುವ ಯೋಜನೆ: ಬೆಂಗಳೂರಿನ ಶುದ್ಧೀಕರಿಸಿದ ನೀರನ್ನು ನೆಲೆಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳ 119 ಕೆರೆಗಳಿಗೆ ತುಂಬಿಸಲು ₹650 ಕೋಟಿ.
2. ಕಿತ್ತೂರು ಕರ್ನಾಟಕ ಮತ್ತು ಉತ್ತರ ಕರ್ನಾಟಕ
-
ಬೆಳಗಾವಿ (ಅಥಣಿ): ಕೊಕಟ್ನೂರಿನ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಹೊಸ ಸರ್ಕಾರಿ ಕೃಷಿ ಕಾಲೇಜು ಸ್ಥಾಪನೆ.
-
ಧಾರಾವಾಡ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬೆಂಗಳೂರು ಮಾದರಿಯಲ್ಲೇ ಡಿಜಿಟಲ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (₹10 ಕೋಟಿ).
-
ವಿಜಯಪುರ: ವಿಮಾನ ನಿಲ್ದಾಣದಲ್ಲಿ ‘ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್’ ಸ್ಥಾಪನೆ.
-
ರಾಯಚೂರು: ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್ ನಿರ್ಮಾಣ.
3. ಕರಾವಳಿ ಮತ್ತು ಮಲೆನಾಡು ಕರ್ನಾಟಕ
-
ಕಾರವಾರ (ಉತ್ತರ ಕನ್ನಡ): ₹198 ಕೋಟಿ ವೆಚ್ಚದಲ್ಲಿ 450 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
-
ಕರಾವಳಿ ಪ್ರವಾಸೋದ್ಯಮ: ಸೀ ಪ್ಲೇನ್ (Sea Plane) ಮತ್ತು ಹೆಲಿ-ಟ್ಯಾಕ್ಸಿ ಸೇವೆಗಳ ಮೂಲಕ ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಯೋಜನೆ.
-
ಶಿವಮೊಗ್ಗ: ವಿಮಾನ ನಿಲ್ದಾಣದಲ್ಲಿ ಪಿಪಿಪಿ ಮಾದರಿಯಲ್ಲಿ ವಿಮಾನ ಬಿಡಿಭಾಗಗಳ ತಯಾರಿಕೆ ಮತ್ತು ಜೋಡಣೆ ಘಟಕ.
4. ಹಳೆ ಮೈಸೂರು ಮತ್ತು ಇತರ ಜಿಲ್ಲೆಗಳು
-
ಮೈಸೂರು ಮತ್ತು ತುಮಕೂರು: ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ₹92 ಕೋಟಿ ವೆಚ್ಚದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ. ಮೈಸೂರು ವಿಮಾನ ನಿಲ್ದಾಣದ ಹತ್ತಿರ ‘ಏರೋಸ್ಪೇಸ್ ಪಾರ್ಕ್’ ಅಭಿವೃದ್ಧಿ.
-
ಕಲಬುರಗಿ: ಕಲಬುರಗಿ ವೈದ್ಯಕೀಯ ಕಾಲೇಜಿನಲ್ಲಿ ಐವಿಎಫ್ (IVF) ಕೇಂದ್ರ ಸ್ಥಾಪನೆಗೆ ₹1 ಕೋಟಿ.
-
ಬೀದರ್: ಪ್ರಾಣಿಗಳ ರೋಗ ಪತ್ತೆಗಾಗಿ ಪಶುವೈದ್ಯಕೀಯ ಕಾಲೇಜಿನಲ್ಲಿ ಸಿಟಿ ಸ್ಕ್ಯಾನ್ ಕೇಂದ್ರದ ಸ್ಥಾಪನೆ.
ಬಜೆಟ್‌ನ ಇತರ ಪ್ರಮುಖ ಹಂಚಿಕೆಗಳು:
-
ಶಿಕ್ಷಣ: ರಾಜ್ಯದ 800 ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಸ್ಕೂಲ್’ಗಳಾಗಿ ಮೇಲ್ದರ್ಜೆಗೇರಿಸಲು ₹3,900 ಕೋಟಿ. 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ.
-
ಗ್ಯಾರಂಟಿ ಯೋಜನೆಗಳು: ಐದು ಮುಖ್ಯ ಗ್ಯಾರಂಟಿ ಯೋಜನೆಗಳ ಮುಂದುವರಿಕೆಗಾಗಿ ಈ ಬಜೆಟ್‌ನಲ್ಲಿಯೂ ದೊಡ್ಡ ಮೊತ್ತದ ಅನುದಾನ ಮೀಸಲಿಡಲಾಗಿದೆ.
-
ಸಂಲ್ಪ: ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ 25 ಹೊಸ ಮೆಟ್ರಿಕ್ ನಂತರದ ವಸತಿ ನಿಲಯಗಳ ಸ್ಥಾಪನೆ.








