ಬಳ್ಳಾರಿ : ಒಂದು ಕಾಲದಲ್ಲಿ ಮಾಧ್ಯಮಗಳಿಗೆ ‘ಏನ್ರಿ ಮೀಡಿಯಾ’ ಹಾಗೆ ಹೀಗೆ ಎಂದು ಅಶ್ಲೀಲವಾಗಿ ಪದ ಬಳಸಿದ್ದ, ಕೊಲೆ ಆರೋಪಿ ದರ್ಶನ್ ಗೆ ಕಳೆದ ಕೆಲವು ದಿನಗಳ ಹಿಂದೆ ಟಿವಿ ಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದೀಗ ಜೈಲಧಿಕಾರಿಗಗಳು ದರ್ಶನ್ ಗೆ ಟಿವಿ ವ್ಯವಸ್ಥೆ ಮಾಡಿದ್ದಾರೆ.
ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್, ಕಳೆದ ಐದು ದಿನಗಳ ಹಿಂದೆ ಟಿವಿಗೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದರು. ಐದು ದಿನಗಳ ಬಳಿಕ ಇಂದು ಬೆಳಗ್ಗೆ ದರ್ಶನ್ ಇರುವ ಸೆಲ್‌ಗೆ ಟಿವಿ ಅಳವಡಿಸಲಾಗಿದೆ. ತಮ್ಮ ಪ್ರಕರಣದ ಅಪ್ಡೇಟ್ ತಿಳಿದುಕೊಳ್ಳಲು ಮತ್ತೆ ‘ಮೀಡಿಯಾ’ ದವರೇ ಬೇಕಾಯ್ತು. ಅಂತೂ ಇಂತೂ ಕೊನೆಗೂ ದರ್ಶನ್ ಸೆಲ್‌ಗೆ ಟಿವಿ ಬಂದಿದೆ.
ಹೈಯರ್ ಕಂಪನಿಯ 32 ಇಂಚಿನ ಟಿವಿಯನ್ನು ದರ್ಶನ್ ಇರುವ ಸೆಲ್‌ಗೆ ನೀಡಲಾಗಿದೆ. ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಕೇಳಿದ್ದ ಮೂರು ಬೇಡಿಕೆಗಳು ಈಡೇರಿದಂತಾಗಿದೆ. ಸರ್ಜಿಕಲ್ ಚೇರ್ ಮೊದಲನೆಯದ್ದು. ಫೋನ್ ಕಾಲ್ ಮಾತನಾಡೋಕೆ ಅವಕಾಶ ಕೇಳಿದ್ದು ಎರಡನೆಯದ್ದು. ಇದೀಗ ಟಿವಿ ನೀಡುವ ಮೂಲಕ ದರ್ಶನ್ ಮೂರು ಬೇಡಿಕೆ ಈಡೇರಿಸಲಾಗಿದೆ.
ಜಾರ್ಜ್‌ಶೀಟ್ ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಇರುವ ಹಿನ್ನೆಲೆ, ಕಳೆದ ಮಂಗಳವಾರ ಟಿವಿ ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ. ಆದರೆ, ಇಂದು ದರ್ಶನ್ ಇರುವ ಸೆಲ್‌ಗೆ ಟಿವಿ ನೀಡಲಾಗಿದೆ.