ಬೆಂಗಳೂರು : ಇಂದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತ ಘಟನೆ ಬೀದರ್ ನಲ್ಲಿ ನಡೆದಿದ್ದು, ಎಟಿಎಂ ಗೆ ಹಣ ಹಾಕುವ ವೇಳೆ ದುಷ್ಕರ್ಮಿಗಳು ಹಾಡು ಹಗಲೇ ಶೂಟೌಟ್ ನಡೆಸಿ ಒಬ್ಬ ಸಿಬ್ಬಂದಿಯನ್ನು ಹತ್ಯೆಗೈದು ಸುಮಾರು 83 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಇಂದು ಬೀದರ್ನಲ್ಲಿ ನಡೆದಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಆದಷ್ಟು ಬೇಗ ದುಷ್ಕರ್ಮಿಗಳನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ATM ಗೆ ಹಣ ಹಾಕುವಾಗ ಕ್ಯಾಮೆರಾ ಇರಬೇಕು, ಸೆಕ್ಯೂರಿಟಿ ಗಾರ್ಡ್ ಇರಬೇಕು. ಹಣ ಹಾಕುವಾಗ ಬಂದೂಕು ಹಾಗೂ ಕ್ಯಾಮರಾ ಇರಬೇಕು. ಸೆಕ್ಯೂರಿಟಿ ಗಾರ್ಡ್ ಗಳಿಗೆ, ಸಿಬ್ಬಂದಿಗಳಿಗೆ ಸ್ಟ್ಯಾಂಡಿಂಗ್ ಇಂಟ್ರಕ್ಷನ್ ಕೊಟ್ಟಿರುತ್ತೇವೆ. ಪ್ರಕರಣದ ಕುರಿತು ಡೀಟೇಲ್ ರಿಪೋರ್ಟ್ ತೆಗೆದುಕೊಂಡ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.
ಆರೋಪಿಗಳ ಹಿನ್ನೆಲೆ ಏನಿದೆ ಅಂತ ನೋಡಬೇಕು. ದರೋಡೆ ಅಷ್ಟಕ್ಕೆ ಸೀಮಿತನ ಅಥವಾ ಬೇರೆ ಇನ್ಯಾವುದೋ ಉದ್ದೇಶ ಇತ್ತೋ ಅಂತ ನೋಡಬೇಕು ನಾವು ಗೈಡ್ಲೈನ್ಸ್ ಫಾಲೋ ಮಾಡಬೇಕಾಗುತ್ತದೆ.ಎಟಿಎಂ ಹಣ ಹಾಕುವಾಗ ಸೆಕ್ಯೂರಿಟಿಗಳು ಇದರ ಕ್ಯಾಮೆರಾ ಆಯ್ತಾ ಎನ್ನುವ ಕುರಿತು ಸಂಪೂರ್ಣವಾಗಿ ಡೀಟೇಲ್ಸ್ ತೆಗೆದುಕೊಳ್ಳುತ್ತೇನೆ. ದುಷ್ಕರ್ಮಿಗಳು ಹಣದ ಸಲುವಾಗಿಯೇ ಈ ಒಂದು ಕೃತ್ಯ ಎಸಗಿದ್ದರ ಅಥವಾ ಬೇರೆ ಇನ್ನಾವುದೋ ಕಾರಣ ಇದೆ ಎಂದು ವರದಿಯ ಬಂದ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದರು.