ಮಂಡ್ಯ : ಸದ್ಯ ರಾಜ್ಯ ರಾಜಕೀಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವಾಚ್ಯ ಪದ ಬಳಸಿದ್ದು ಭಾರಿ ಸದ್ದು ಮಾಡುತ್ತಿದ್ದು, ಈಗ ಬೆಳಗಾವಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಎಂಎಲ್ಸಿ ಸಿಟಿ ರವಿ ಅವರನ್ನು ಪೊಲೀಸರು ಹಾಜರುಪಡಿಸಿದ್ದಾರೆ ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು ಯಾರಾದರೂ ಹೆಣ್ಣು ಮಕ್ಕಳಿಗೆ ಬೈದಿದ್ದನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಯಾಕೆ ಆ ಪದಸಿದ್ದಾರೋ ನನಗೆ ಗೊತ್ತಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ ನನಗೆ ಅವಾಚ್ಯ ಪದ ಬಳಸಿದರು ಅಂತ. ಬೈದಿದ್ದು ನನಗೆ ಗೊತ್ತಿಲ್ಲ ಅಲ್ಲಿ ಬೇರೆಯವರು ಕೇಳಿದ್ದಾರೆ ಅಲ್ವ? ಆಡಿಯೋ ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೆ ಘಟನೆ ನಡೆದಾಗ ಹೊರಟ್ಟಿ ಅವರು ಇರಲಿಲ್ಲ ಎಂದು ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಬ್ಬ ಹೆಣ್ಣು ಮಗಳಿಗೆ ಅವಹೇಳನಕಾರಿಯಾಗಿ ಬೈದರೆ ತುಚ್ಚವಾಗಿ ಸಿಟಿ ರವಿ ಮಾತನಾಡಿದರೆ ಸಪೋರ್ಟ್ ಮಾಡುತ್ತಾರಾ? ಸಿಟಿ ರವಿ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅವಾಚ್ಯ ಪದ ಬಳಕೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಅಲ್ಲಿ ಇದ್ದವರು ಸಹ ಕೇಳಿಸಿಕೊಂಡಿದ್ದಾರೆ ಆಡಿಯೋ ರೆಕಾರ್ಡ್ ಆಗಿದೆಯಲ್ಲ. ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳಕರ್ಗೆ ಅವಾಚ್ಯ ಪದಗಳಿಂದ ಬೈದಿದ್ದೇನೆ ಎಂದು ಒಪ್ಪಿಕೊಳ್ಳುತ್ತಾರಾ? ಹಾಗಾಗಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದು ಒಂದು ರೀತಿಯ ಕ್ರಿಮಿನಲ್ ಅಫೆನ್ಸ್ ಆಗಿದೆ ಎಂದು ತಿಳಿಸಿದರು.