ಬೆಂಗಳೂರು : ದೇಶದಲ್ಲಿ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆ ಸ್ಥಾಪಿಸಿದ್ದು ನಾವೇ. ಡ್ರಗ್ಸ್ ಬಳಕೆ ಡ್ರಗ್ಸ್ ಮಾರಾಟ ಅಷ್ಟೇ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ವರದಕ್ಷಿಣೆ ಕಿರುಕುಳ ಹೆಚ್ಚಾಗಿದೆ. ಕಡಿಮೆಯಾಗಿದ್ದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ತಿಳಿಸಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ವಿಚಾರವಾಗಿ 1999 ರಿಂದ ಇವರಿಗೂ 12 ಜನ ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಕೆಜೆ ಜಾರ್ಜ್, ಆರ್ ಅಶೋಕ, ರಾಮಲಿಂಗ ರೆಡ್ಡಿ, ಬಸವರಾಜ ಬೊಮ್ಮಾಯಿ ಅರಗ ಜ್ಞಾನೇಂದ್ರ ಇವರ ಅವಧಿಯಲ್ಲಿ ಕರ್ನಾಟಕ ಕೊಲೆ ಮುಕ್ತ, ಡ್ರಗ್ಸ್ ಮುಕ್ತ ಅತ್ಯಾಚಾರ ಮುಕ್ತ ರಾಜ್ಯವಾಗಿರಲಿಲ್ಲ. ಇವರೆಲ್ಲರ ಕಾಲದಲ್ಲೂ ರಾಜ್ಯದಲ್ಲಿ ಅಪರಾಧ ಕೃತ್ಯಗಳು ನಡೆದಿವೆ. ಹಾಗಂತ ಇದನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ.
2020 ರಿಂದ 25ರ ಜನವರಿವರೆಗೆ ರಾಜ್ಯದಲ್ಲಿ ಸಾಕಷ್ಟು ಹತ್ಯೆಗಳಾಗಿವೆ. 2020 ರಲ್ಲಿ 1315, 2021 ರಲ್ಲಿ 2019, 2022 ರಲ್ಲಿ 1,366 ಕೊಲೆ 2023ರಲ್ಲಿ 2094 2024 ರಲ್ಲಿ 21, 984 ಸೈಬರ್ ಅಪರಾಧ ಕೇಸುಗಳು ದಾಖಲಾಗಿವೆ. ದೇಶದಲ್ಲಿ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆ ಸ್ಥಾಪಿಸಿದ್ದು ನಾವೇ. ಡ್ರಗ್ಸ್ ಬಳಕೆ ಡ್ರಗ್ಸ್ ಮಾರಾಟ ಅಷ್ಟೇ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ವರದಕ್ಷಿಣೆ ಕಿರುಕುಳ ಹೆಚ್ಚಾಗಿದೆ. ಕಡಿಮೆಯಾಗಿದ್ದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಬಿಜೆಪಿಯವರು ಹೇಳುವಾಗ ಉಳಿದ ರಾಜ್ಯಗಳ ಕ್ರೈಮ್ ರೇಟ್ ಗಮನಿಸಲಿ ಎಂದು ವಿಧಾನ ಪರಿಷತ್ ನಲ್ಲಿ ಜಿ ಪರಮೇಶ್ವರ್ ಉತ್ತರ ನೀಡಿದರು.
ಕರ್ನಾಟಕ ಪೊಲೀಸರು ಅತ್ಯಂತ ಕ್ರಿಯಾಶೀಲರು ಸಮರ್ಥರು. ದೇಶದಲ್ಲಿ ವರ್ಷಕ್ಕೊಮ್ಮೆ ಡಿಜಿ ಮತ್ತು ಐಜಿಪಿಗಳ ಸಭೆ ನಡೆಯುತ್ತದೆ. ನಮ್ಮ ಕರ್ನಾಟಕ ಪೊಲೀಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ನಮ್ಮ ಇಲಾಖೆಗೆ ನಾವು ಎಲ್ಲಾ ರೀತಿಯ ಸೌಲಭ್ಯ ಕೊಡುತ್ತಿದ್ದೇವೆ. ಪೊಲೀಸರ ಬದುಕು ಹೇಗಿದೆ ಎಂದು ನೋಡಿದರೆ ನೋವಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.