ಬೆಂಗಳೂರು : ತಮ್ಮ ಕ್ಷೇತ್ರದ ಅಭಿವೃದ್ಧಿಗಳಿಗೆ ಅನುದಾನ ನೀಡಿ ಎಂದು ಸದನದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಕದಲೂರು ಬೇಡಿಕೆ ಇಟ್ಟರು ಇದೆ ವೇಳೆ ನಮಗೂ ಅನುದಾನ ಕೇಳಿ ಕೇಳಿ ಸಾಕಾಗಿದೆ ಎಂದು ಬೇಸರವನ್ನು ಸಹ ಹೊರಹಾಕಿದ ಪ್ರಸಂಗ ಇಂದು ನಡೆಯಿತು.
ಹೌದು ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಶಾಸಕ ಉದಯ್ ಕದಲೂರ್ ಅನುದಾನಕ್ಕಾಗಿ ಬೇಡಿಕೆ ಇಟ್ಟರು. ಸಚಿವ ಮಹಾದೇವಪ್ಪ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಾಕಿ ಇದೆ. ಮದ್ದೂರಿನಲ್ಲಿ ಎಸ್‌ಸಿ ವರ್ಗದ ಜನ ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬೇಕು ಎಂದು ಆಗ್ರಹಿಸಿದರು.
ಅನುದಾನ ಸಿಗದೆ ಇರುವುದರಿಂದ ಕ್ಷೇತ್ರಕ್ಕೆ ಹೋಗಲು ಆಗುತ್ತಿಲ್ಲ. ಹೋದರೆ ಜನ ಅಪೂರ್ಣ ಕಾಮಗಾರಿ ತೋರಿಸ್ತಾರೆ. ನಮಗೆ ಅನುದಾನ ಬೇಕು, ಅನುದಾನ ಕೇಳಿ ಕೇಳಿ ನಮಗೂ ಸಾಕಾಗಿದೆ. ಕಾಲಮಿತಿಯೊಳಗೆ ಅನುದಾನ ಕೊಡಿ ಎಂದು ಮದ್ದೂರು ಶಾಸಕ ಉದಯ್ ಅಳಲು ತೋಡಿಕೊಂಡ ಪ್ರಸಂಗ ನಡೆಯಿತು. ಇದೀಗ ಈ ಒಂದು ವಿಚಾರ ವಿಪಕ್ಷಗಳಿಗೆ ಭಾರಿ ಅಸ್ತ್ರವಾಗಿದೆ.








