ಹಾವೇರಿ : ಜಿಲ್ಲೆ ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಕಾರ್ಣಿಕ ನುಡಿಯಲಾಗಿದೆ. ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಎಂದು 12 ಅಡಿ ಎತ್ತರದ ಬಿಲ್ಲೇರಿ ಗೊರವಯ್ಯ ಹನುಮನಗೌಡ ಗುರೇಗೌಡರ ದೈವವಾಣಿ ನುಡಿದಿದ್ದಾರೆ.
ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಕಾರ್ಣಿಕ ನುಡಿ ಹೀಗಿದೆ. 12 ಅಡಿ ಎತ್ತರದ ಬಿಲ್ಲೇರಿ ಗೊರವಯ್ಯ ಹನುಮನಗೌಡ ಗುರೇಗೌಡರ ಕಾರ್ಣಿಕ ನುಡಿದ್ದಿದು,ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಎಂದು ದೈವವಾಣಿ ನುಡಿದಿದ್ದಾರೆ.ಇದರ ಅರ್ಥ, ಪ್ರಸಕ್ತ ಈ ವರ್ಷ ನಮ್ಮ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಹೀಗಾಗಿ ಸಮೃದ್ಧವಾಗಿ ಬೆಳೆಗಳು ಬರಲಿವೆ ಎಂದು ಗ್ರಾಮಸ್ಥರು ಈ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದಾರೆ