ಕಲಬುರ್ಗಿ : ವಕ್ಫ್ ವಿವಾದ ರಾಜ್ಯದಲ್ಲಿ ತಾರಕಕ್ಕೆ ಏರಿದ್ದು, ನಾಳೆ ಕೋಲಾರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಅಲ್ಲದೆ, ಈ ನಡುವೆ ವಕ್ಫ್ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಆಗ್ರಹಿಸಿದ್ದು, ನವೆಂಬರ್ 6 ರಂದು ರಾಜ್ಯಕ್ಕೆ ಕೇಂದ್ರದಿಂದ ವಿಶೇಷ ತಂಡ ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೆ ಸಚಿವ ಜಮೀರ್ ಅಹ್ಮದ್ ಇಂದು ನಿನ್ನೆದಲ್ಲ ಇದು ಸ್ವಾತಂತ್ರಕ್ಕೂ ಮೊದಲೇ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಕೇಂದ್ರ ಏನು ಬೇಕಾದರೂ ತರಲಿ. ತಂದ ಬಳಿಕ ಮುಂದೆ ಏನು ಮಾಡಬೇಕೋ ಅದನ್ನ ಮಾಡುತ್ತೇವೆ.ಆದರೆ ವಕ್ಫ್ ಇಂದು ನಿನ್ನೆಯದಲ್ಲ ಸ್ವಾತಂತ್ರ್ಯಕ್ಕೂ ಮೊದಲೇ ವಕ್ಫ್ ಇದೆ ಎಂದು ತಿಳಿಸಿದರು.
ಮುಂದುವರೆದು ವಕ್ಫ್ ಬಳಿ ಇರುವುದು ಸರ್ಕಾರ ಕೊಟ್ಟ ಜಮೀನಲ್ಲ. ಈ ಕುರಿತು ಹಲವರಿಗೆ ತಪ್ಪು ಕಲ್ಪನೆ ಇದೆ. ವಕ್ಫ್ ಎಂದರೆ ಅದು ಸರ್ಕಾರವೇ ಅದಕ್ಕೆ ಕೊಟ್ಟ ಜಮೀನು ಎಂದುಕೊಂಡಿದ್ದಾರೆ. ಆದರೆ ವಕ್ಫ್ ಬಳಿ ಇರುವುದು ಸರ್ಕಾರ ಕೊತ್ತ ಜಮೀನಲ್ಲ. ಅದು ದಾನಿಗಳು ಕೊಟ್ಟ ಜಮೀನು ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.
ಇನ್ನು ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಚ್ಡಿಕೆ ಮೊದಲಿನಿಂದಲೂ ಸರ್ಕಾರ ಬೀಳುತ್ತೆ ಅಂತಿದ್ದಾರೆ. ಕುಮಾರಸ್ವಾಮಿ ಹೇಳಿದಂತೆ ಯಾವತ್ತು ಸರ್ಕಾರ ಬಿದ್ದಿಲ್ಲ. ಕುಮಾರಸ್ವಾಮಿಗೆ ತಮ್ಮ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಇನ್ನು ಬೇರೆಯವರ ಸರ್ಕಾರ ಹೇಗೆ ಉರುಳಿಸಲು ಸಾಧ್ಯ? ನಮ್ಮ ಸರ್ಕಾರ 5 ವರ್ಷ ಅಧಿಕಾರವನ್ನು ಪೂರೈಸಲಿದೆ ಎಂದು ಕಲಬುರ್ಗಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.