ಕಲಬುರ್ಗಿ : ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನದ ಕುರಿತು ಕೋರ್ಟಿಗೆ ಎಸ್ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಸರ್ಕಾರ ಇರೋದ್ರಿಂದ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ನಮ್ಮ ತಂದೆಯ ಹೆಸರು ನಮ್ಮ ಹೆಸರು ನಲ್ಲಿ ಹಾಕಿದ್ದಾರೆ ಯಾವಾಗ ರಾಹುಲ್ ಗಾಂಧಿ ವಿಚಾರದ ಬಗ್ಗೆ ಪ್ರಸ್ತಾಪಿಸಿದರು. ಅವಾಗಿನಿಂದಲೂ ಕೂಡ ಈ ಮತಗಳ್ಳತನದ ವಿಚಾರವಾಗಿ ನಮ್ಮ ಮೇಲೆ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಹರ್ಷಾನಂದ ಗುತ್ತೇದಾರ್ ಆರೋಪಿಸಿದರು.
ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಒಂದು ಸುಳ್ಳು ಪ್ರಕರಣ ಆಗಿದ್ದು ನಮ್ಮ ಮೇಲೆ ಸೃಷ್ಟಿ ಮಾಡಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ತಮ್ಮ ಸೋಲನ್ನು ವೋಟ್ ಚೋರಿ, ಬಿಜೆಪಿ ಅವರು ಮಾಡುತ್ತಿದ್ದಾರೆ ಅಂತ ಷಡ್ಯಂತ್ರ ಮಾಡಿದ್ದಾರೆ. ಆಳಂದದಲ್ಲಿ ಗೆದ್ದಿರುವುದು ಬಿ ಆರ್ ಪಾಟೀಲ್ 2023ರಲ್ಲಿ ಕೇಸ್ ದಾಖಲಾಗಿದೆ. ಕೇಸ್ ನಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಏಕಾಏಕಿ ಬಿಹಾರ್ ಎಲೆಕ್ಷನ್ ಬರುತ್ತೋ ಯಾವಾಗ ರಾಹುಲ್ ಗಾಂಧಿ ಬಿಜೆಪಿ ಓಟ್ ಚೋರಿ ಮಾಡ್ತಿದೆ ಅಂತ ದೇಶದಲ್ಲಿ ಹೈಲೈಟ್ ಮಾಡುತ್ತಾರೆ ಬಿಹಾರ್ ಎಲೆಕ್ಷನ್ ನಲ್ಲಿ ಪ್ರಭಾವ ಬಿರಲು ಓಟ್ ಚೋರಿ ಹೈಲೈಟ್ ಮಾಡುತ್ತಾರೆ.
ಇದನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಬಿಆರ್ ಪಾಟೀಲ್ ಹೋಗಿ ನಮ್ಮ ಪ್ರಕರಣ ಹೀಗಿದೆ ಎಂದು ಹೇಳಿ ತಮ್ಮ ವೋಟು ಚೋರಿಯಲ್ಲಿ ಆಳಂದ್ ಕ್ಷೇತ್ರ ಕುರಿತು ಹೇಳಿಕೆ ನೀಡಿದರು ಅವರು ಮಂತ್ರಿ ಆಗುವ ಸಲುವಾಗಿ ಅವರಿಗೆ ಹತ್ತಿರವಾದರೂ. ಬಿಹಾರ್ ಎಲೆಕ್ಷನ್ ಆಯ್ತು ಅಲ್ಲಿಯ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದರು. ದೆಹಲಿಯಲ್ಲಿ ಡಿಸೆಂಬರ್ 15ಕ್ಕೆ ಸಮಾವೇಶವಿದೆ ಇದರ ಒಳಗಾಗಿ ನಮ್ಮ ಹೆಸರು ಸೇರಿಸಿ ಅವರ ಭಾಷಣದಲ್ಲಿ ಹೇಳಿಕೆ ನೀಡಲು ಮಾಡಿದ್ದಾರೆ. ಇದು ಒಂದು ಸುಳ್ಳು ಪ್ರಕರಣ ಆಗಿದ್ದು ನಾವು ನ್ಯಾಯಾಲಯದಲ್ಲಿ ನಿರ್ದೋಷಿಯಾಗಿ ಬರುತ್ತೇವೆ ಎಂದು ನಂಬಿಕೆ ಇದೆ ಎಂದರು.








