ಬಾಗಲಕೋಟೆ : ಬಾಗಲಕೋಟೆ ಉಪಚುನಾವಣೆ ರಂಗೆರಿದ್ದು, ಇದೀಗ ನೀತಿ ಸಂಹಿತೆ ಉಲ್ಲಂಘನೆ ಮಾಡಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಕಾರಿನಲ್ಲಿ ದಾಖಲೆಯಿಲ್ಲದೆ ಹಣ ಸಾಗಿಸುತ್ತಿದ್ದರು.
ಈ ವೇಳೆ ಸಿಬ್ಬಂದಿಗಳು 32,50,000 ಸಿಬ್ಬಂದಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಹೊನ್ನಕಟ್ಟಿ ಚೆಕ್ಪೋಸ್ಟ್ ನಲ್ಲಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸುತಿರುವುದು ಪತ್ತೆಯಾಗಿದೆ. KA-32, P-3991 ನಂಬರ್ ಕಾರ್ ನಲ್ಲಿ ಹಣ ಸಾಗಟ ಮಾಡುತ್ತಿದ್ದರು. ದಾಖಲೆ ಇಲ್ಲದೆ ಹಾಗೂ ಸೂಕ್ತವಾದ ಕಾರಣ ನೀಡದೆ ಹಿನ್ನಲೆ ಇದೀಗ ಹಣ ವಶಕ್ಕೆ ಪಡೆಯಲಾಗಿದೆ.








