ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ 30 ವರ್ಷದ ವಿಕ್ರಾಂತ್ ಎನ್ನುವ ಕಾಡಾನೆ ಒಂದು ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪುರ ಗ್ರಾಮದ ಬಳಿ ನಡೆದಿದೆ.
ಹೌದು ವಿದ್ಯುತ್ ತಂತಿ ತಗುಲಿ ವಿಕ್ರಾಂತ ಹೆಸರಿನ 30 ವರ್ಷದ ಕಾಡಾನೆ ಸಾವನನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪುರ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮೂರು ದಿನಗಳಿಂದ ಆಲ್ದೂರು ಪುರ ಗ್ರಾಮದಲ್ಲಿ ಕಾಡಾನೆ ಹಿಂಡು ಬಿಡು ಬಿಟ್ಟಿದ್ದವು. ಸಕಲೇಶಪುರ ಮಾರ್ಗವಾಗಿ ಸುಮಾರು 24 ಕಾಡಾನೆಗಳು ಚಿಕ್ಕಮಗಳೂರಿಗೆ ಬಂದಿದ್ದವು.
ಬೀಟಮ್ಮ, ಭುವನೇಶ್ವರಿ ತಂಡದಿಂದ 24 ಕಾಡಾನೆಗಳು ಬೇರ್ಪಟ್ಟಿದ್ದವು. ಈ ಒಂದು 24 ಆನೆಗಳಲ್ಲಿ ವಿಕ್ರಾಂತ್ ಎಂಬ 30 ವರ್ಷದ ಆನೆ ಕೂಡ ಇತ್ತು ಇದೀಗ ವಿದ್ಯುತ್ ತಂತಿ ತುಳಿದು ಈ ಒಂದು ಧಾರಣವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.