ಬೆಂಗಳೂರು : ಬ್ಯಾಂಕ್ ಗಳಿಂದ ಲೆಕ್ಕ ಕೋರಿ ಹೈಕೋರ್ಟಿಗೆ ವಿಜಯಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಯಿತು. ಬ್ಯಾಂಕುಗಳ ಪರ ಹಿರಿಯ ವಕೀಲ ವಿಕ್ರಂ ಹುಯ್ಲಗೋಳ ಅವರು ವಾದ ಮಂಡಿಸಿದರು.
ವಿಜಯ್ ಮಲ್ಯ ದೇಶ ತೊರೆದು ದೇಶ ಭ್ರಷ್ಟರಾಗಿದ್ದಾರೆ. ವಿಜಯ್ ಮಲ್ಯ ಮುಗ್ಧರಾದರೆ, ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ದೇಶ ಬಿಟ್ಟು ಪರಾರಿ ಆಗಿದ್ದಾರೆ. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆ ಎಂದು ವಾದಿಸಿದರು.
ಈ ವೇಳೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಸೂಚನೆ ನೀಡಿದರು. ಬ್ಯಾಂಕುಗಳ ಪರ ವಕೀಲರಿಗೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿತು.
ಈ ವೇಳೆ ಹೈ ಕೋರ್ಟ್ ನೀವು ಕಂಪನಿ ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಲಿಲ್ಲ? ಎಂದು ವಿಜಯ ಮಲ್ಯ ಪರ ವಕೀಲ ಸಜನ್ ಪ್ರಶ್ನೆ ಮಾಡಿತು. ಅರ್ಜಿಯಲ್ಲಿ ಬ್ಯಾಂಕ್ ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರಿ ಎಂದು ಜಡ್ಜ್ ಪ್ರಶ್ನಿಸಿದರು. ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಆಧೀನದಲ್ಲಿ ಬರುತ್ತದೆ. ಒಂದು ಕಾಲದಲ್ಲಿ ಯು ಬಿ ಎಚ್ ಎಲ್ ಕಂಪನಿ ವಿಶ್ವದಲ್ಲಿಯೇ ಪ್ರಸಿದ್ಧ ಕಂಪನಿಯಾಗಿತ್ತು. ಬ್ಯಾಂಕ್ ನವರು ಒಂದು ಹೇಳುತ್ತಾರೆ ಅಫಿಶಿಯಲ್ ಲಿಕ್ವಿಡೇಡರ್ ಮತ್ತೊಂದು ಹೇಳುತ್ತಾರೆ.
ಈ ವೇಳೆ ರಿಟ್ ಅರ್ಜಿ ಸಲ್ಲಿಸುವುದು ಸಂವಿಧಾನಿಕ ಹಕ್ಕು ಎಂದು ಉಲ್ಲೆಖಿಸಿ ಸಜನ್ ಪೂವಯ್ಯ ತಿಳಿಸಿದರು. ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದಲೇ ಕೇಸಲ್ಲಿ ವಿಜಯಮಲ್ಯ ಹಾಜರಾಗಿಲ್ಲ ಎಂದು ಹೈಕೋರ್ಟ್ ಇದೆ ವೇಳೆ ತಿಳಿಸಿತು. ದೇಶದ ವಿವಿಧತೆ ನಡೆದಿರುವ ಕೋರ್ಟು ವಿಚಾರಣೆಗೆ ವಿಜಯ್ ಮಲ್ಯ ಹಾಜರಾಗಿಲ್ಲ ಹೀಗಿರುವಾಗ ರಿಟ್ ಅರ್ಜಿ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತಿರಿ? ಜೈ ಮಲ್ಯ ಲಂಡನ್ ಕೋರ್ಟ್ ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ.
ಈ ವೇಳೆ ವಿಜಯ್ ಮಲ್ಯ ಪರವಾಗಿ ಹಿರಿಯ ವಕೀಲ ಸಜನ್ ಪೂವಯ್ಯ ಮಲ್ಯ 6,200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು. 14,000 ಕೋಟಿ ವಸೂಲಿ ಮಾಡಿದ್ದಾರೆ ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ ಸಹ 10200 ಕೋಟಿ ವಸೂಲಾಗಿದೆ ಎಂದಿದ್ದಾರೆ ಸಂಪೂರ್ಣವಾಗಿ ಸಾಲ ತೀರಿದರು ಕೂಡ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು.








