ಬೀದರ್ : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬೀದರ್ ಜಿಲ್ಲೆಯ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೀದರ್ ಜಿಲ್ಲೆಗೆ 6 ಜನರ ಮೃತದೇಹಗಳು ತಲುಪಿದ್ದು ಇದೀಗ ಬೀದರ್ ನಗರದ ಗುಮ್ಮೆ ಲೇಔಟ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿತು.
ಹೌದು ಬೀದರ್ ನಗರದ 6 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೀದರ್ ನ ಗುಮ್ಮೆ ಲೇಔಟ್ ರುದ್ರಭೂಮಿಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಯಿತು. ಲಾಡಗೇರಿ ಬಡಾವಣೆಯ ಸುಲೋಚನಾ, ಲಕ್ಷ್ಮಿ, ನೀಲಮ್ಮ, ಸಂತೋಷ್ ಕುಮಾರ್, ಸುನಿತಾ ಹಾಗೂ ಕಲಾವತಿ ಅಂತ್ಯಕ್ರಿಯೆ ನಡೆಯಿತು. ಭೀಕರ ರಸ್ತೆ ಅಪಘಾತದಲ್ಲಿ 6 ಸೋದರ ಸಂಬಂಧಿಗಳು ಮೃತಪಟ್ಟಿದ್ದರು. ಉತ್ತರ ಪ್ರದೇಶದ ವಾರಣಾಸಿ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.