ಬೆಂಗಳೂರು : ಹಬ್ಬಕ್ಕೆಂದು ಊರಿಗೆ ಹೋಗುವವರೇ ಈ ಸುದ್ದಿಯನ್ನು ಒಮ್ಮೆ ಓದಿ ಏಕೆಂದರೆ ಮಂಗಳವಾರದಿಂದ ಸರ್ಕಾರಿ ಬಸ್ ಗಳು ರಸ್ತೆಗೆ ತಿಳಿಯಲ್ಲ. ಆಗಸ್ಟ್ 5 ರಿಂದ ಸಾರಿಗೆ ನೌಕರರ ಅನಿರ್ದಿಷ್ಟವಧಿ ಮುಷ್ಕರಕ್ಕೆ ಸಾರಿಗೆ ಸಂಘಟನೆಗಳು ಇದೀಗ ಸಜ್ಜಾಗಿವೆ. BMTC, KSRTC, NWKRTC, ಹಾಗು KKRTC ಬಸ್ ಸ್ಥಗಿತ ಕೊಳ್ಳುತ್ತವೆ.
ವೇತನ ಹೆಚ್ಚಳ ಮಾಡದ ಸರ್ಕಾರದ ಮೇಲೆ ನೌಕರರು ಇದೀಗ ಆಕ್ರೋಶ ಹೊರ ಹಾಕಿದ್ದು, ಆರು ತಿಂಗಳಿನಿಂದ ನೌಕರರ ವೇತನ ಪರಿಷ್ಕರಣಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕಳೆದ ವರ್ಷ ಡಿಸೆಂಬರ್ 31ರಂದು ಮುಷ್ಕರಕ್ಕೆ ನೌಕರರು ಕರೆ ನೀಡಿದ್ದರು.ಅಂದು ಸಮಾಧಾನ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ಸರ್ಕಾರ ನೀಡಿತ್ತು.
ಆದರೆ ಇದುವರೆಗೂ ನೌಕರರ ಬೇಡಿಕೆಗೆ ರಾಜ್ಯ ಸರ್ಕಾರ ಈಡೇರಿಸಿಲ್ಲ. ಹಾಗಾಗಿ ಆಗಸ್ಟ್ 5 ರಿಂದ ಬಸ್ ನಿಲ್ಲಿಸಿ ಪುಷ್ಕರ ಆರಂಭಿಸುತ್ತೇವೆ ಮತ್ತು ನಿಗಮಗಳ ಅಧಿಕಾರಿಗಳಿಗೆ ಪುಷ್ಕರದ ನೋಟಿಸ್ ಕೂಡ ಕಳುಹಿಸಲಾಗಿದೆ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಗ್ಯಾರಂಟಿ ಎಂದು ತಿಳಿಸಿವೆ.
ಖಾಸಗಿ ಬಸ್ ಮಾಲೀಕರ ಜೊತೆ ಸಭೆ
ಆಗಸ್ಟ್ 5ದರಿಂದ ಸಾರಿಗೆ ನೌಕರರು ಅನಿರ್ದಿಷ್ಟವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಖಾಸಗಿ ಮಾಲೀಕರ ಜೊತೆಗೆ ಸಭೆ ನಡೆಸಲು ಸಿದ್ಧತೆ ಮಾಡಿದೆ. ಇಂದು ಜಾರಿಗೆ ಆಯುಕ್ತ ಯೋಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಸಾರಿಗೆ ನೌಕರರು ಬಸ್ ರಸ್ತೆಗೆ ಇಳಿಸದಿದ್ದರೆ ಪರ್ಯಾಯ ವ್ಯವಸ್ಥೆ ಮೊರೆ ಹೋಗಿದ್ದು ಈ ಕುರಿತು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆಗೆ ಕಲ್ಪಿಸಲು ಖಾಸಗಿ ಮಾಲೀಕರ ಜೊತೆಗೆ ಸಾರಿಗೆ ಆಯುಕ್ತರು ಇಂದು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಶಾಂತಿನಗರ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ.