ಹುಬ್ಬಳ್ಳಿ : ಮೈಸೂರು ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಪೂರ್ವ ತಯಾರಿ ಇಲ್ಲದೆ ಈ ಒಂದು ಗಲಭೆ ಆಗಲು ಸಾಧ್ಯವೇ ಇಲ್ಲ. ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ದೊಡ್ಡ ಗಲಾಟೆ ಆಗಿದೆ ಅಂದರೆ ಹೇಗೆ? ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ. ಆದರೆ ಗಲಭೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದು ಸ್ಪಷ್ಟವಾಗಿದೆ. ಹುಬ್ಬಳ್ಳಿ ಪಿ ಎಫ್ ಐ ಗಲಭೆ ಕೇಸ್ ಹಿಂಪಡೆದಿರುವುದು ಕುಮುಕು ಸಿಕ್ಕಿದೆ.ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಾಗೆ ವರ್ತಿಸಿದ್ದಾರೆ. ತನ್ನ ಎಡಬಿಡಂಗಿತನದಿಂದಲೇ ಕಾಂಗ್ರೆಸ್ ಎಲ್ಲೂ ಗೆಲ್ಲುತ್ತಿಲ್ಲ ಎಂದರು.
ಇದೇ ರೀತಿ ಆದರೆ ರಾಜ್ಯದಲ್ಲೂ ನಿಮ್ಮನ್ನು ಕಿತ್ತು ಎಸೆಯುತ್ತಾರೆ. ಕಾಂಗ್ರೆಸ್ ಕುಮ್ಮಕ್ಕಿ ನಿಂದ ಮತಾಂಧ ಶಕ್ತಿಗಳು ಕೆಲಸ ಮಾಡುತ್ತಿವೆ. ಗೃಹ ಸಚಿವರು ಅವರಿಗೆ ಬೇಕಾದಂತೆ ಮಾತುಗಳು ಆಡುತ್ತಿದ್ದಾರೆ. ಗಲಭೆ ಮಾಡಿರುವರು ಕ್ರಿಮಿನಲ್ ಚಟುವಟಿಕೆ ಹಿನ್ನೆಲೆ ಉಳ್ಳವರಾಗಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.