ಬೆಂಗಳೂರು : ಕಾಂಗ್ರೆಸ್ ನಲ್ಲಿ ಇದೀಗ ಮತ್ತೆ ನಾಯಕತ್ವಕ್ಕಾಗಿ ರಣತಂತ್ರ ಜೋರಾಗಿದೆ. ಯಾವಾಗ ರಿಸೀವ್ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ದೆಹಲಿ ಭೇಟಿ ನೀಡಿದರೊ ಇತ್ತ ಸಿಎಂ ಸಿದ್ದರಾಮಯ್ಯ ಆಪ್ತರಿಂದಲೂ ರಿಂದಲೂ ಕೂಡ ಇದೀಗ ಪ್ಲಾನ್ ಬಿ ತಯಾರಿ ನಡೆದಿದ್ದು ಮತ್ತೊಂದು ಸುತ್ತಿನ ಕ್ರಾಂತಿಗೆ ಸಿಎಂ ಸಿದ್ದರಾಮಯ್ಯ ಹೊಸ ದಾಳ ಉರುಳಿಸಲು ಸಿಎಂ ಸಿದ್ದರಾಮಯ್ಯ ಬಣ ಸಜ್ಜಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಬದಲಾವಣೆಯ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ ಎಂದು ಆಪ್ತರ ಬಳಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದು ಆದರೂ ಎಲ್ಲದಕ್ಕೂ ಸಿದ್ಧರಾಗಿರುವಂತೆ ಸಚಿ ವರು ಸಲಹೆ ಕೊಟ್ಟಿದ್ದಾರೆ. ಅಹಿಂದ ಸಚಿವರಿಂದ ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಡಲು ಆಪ್ತ ನಾಯಕರು ಯತ್ನಿಸುತ್ತಿದ್ದಾರೆ. ಸಂಪೂರ್ಣ ಲೆಕ್ಕಾಚಾರ ಹಾಕಿದ್ದು, ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಲು ಆಪ್ತ ಸಚಿವರು ಸಿದ್ಧತೆ ಮಾಡಿದ್ದಾರೆ.
ಮೇ ತಿಂಗಳ ಬೆಳವಣಿಗೆಗಳ ಮೇಲೆ ಸಿಎಂ ಬಣ ಲೆಕ್ಕಾಚಾರ ಹಾಕಿದ್ದು, ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಸಚಿವರಿಗೆ ಗುಮಾನಿ ಇದೇ ಹೈಕಮಾಂಡ್ ಪ್ರಸ್ತಾಪ ಮಾಡಿರುವ ಬಗ್ಗೆ ಸಚಿವರಿಗೆ ಗುಮಾನಿ ಇದೆ. ಇದೇ ಅಂಶವನ್ನು ಸಿದ್ದರಾಮಯ್ಯಗೆ ಗಮನಕ್ಕೆ ತಂದಿರುವ ಆಪ್ತ ಬಳಗ ಹೀಗಾಗಿ ಮೇ ತಿಂಗಳ ಬೆಳವಣಿಗೆ ಮೇಲೆ ಸಿಎಂ ಬಣ ಕಣ್ಣಿಟ್ಟಿದೆ.








