ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಮುಸ್ಲಿಂ ಮುಖಂಡ ಮುಸ್ತಾಕ್ ಪರಾರಿಯಾಗಿದ್ದು ಇದೀಗ ಆತನ ಪತ್ತೆಗೆ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಈಗಾಗಲೇ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 8 ಜನರನ್ನು ಅರೆಸ್ಟ್ ಮಾಡಿದ್ದಾರೆ. ಠಾಣೆ ಮೇಲೆ ದಾಳಿಗೂ ಮುನ್ನ ಆತ ಪ್ರಚೋದನಕಾರಿ ಭಾಷಣ ಮಾಡಿದ್ದ. ಆತನ ಭಾಷಣದಿಂದಲೇ ಠಾಣೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಪ್ರಚೋದನಕಾರಿ ಭಾಷಣ ಮಾಡಿದ ಮುಸ್ಲಿಂ ಮುಖಂಡ ಪರಾರಿಯಾಗಿದ್ದು ಠಾಣೆ ಮುಂದೆ ಮುಸ್ಲಿಂ ಮುಖಂಡ ಮುಷ್ಟಾಕ್ ಪ್ರಚೋದನಕಾರಿ ಭಾಷಣ ಮಾಡಿ ಇದೀಗ ಎಸ್ಕೇಪ್ ಆಗಿದ್ದಾನೆ. ಸದ್ಯ ಮುಸ್ಲಿಂ ಮುಖಂಡ ಮುಸ್ತಾಕ್ ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಲ್ಲೇಸೆದ ಬಹುತೇಕರು ಉದಯಗಿರಿ ಠಾಣೆಯ ಅಕ್ಕಪಕ್ಕದ ನಿವಾಸಿಗಳೇ ಎಂದು ಹೇಳಲಾಗುತ್ತಿದೆ. ಸಿಸಿಟಿವಿ ದೃಶ್ಯ ಮೊಬೈಲ್ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಮುಸ್ತಾಕ್ ಸೇರಿ ಹಲವರ ಬಂಧನಕ್ಕೆ ಸಿಸಿಬಿ ಪೊಲೀಸರು ಇದೀಗ ಬೀಸಿದ್ದಾರೆ.ಮುಸ್ತಾಕ್ ಪ್ರಚೋದನಕಾರಿ ಭಾಷಣದಿಂದಲೇ ಕಿಡಿಗೇಡಿಗಳು ಠಾಣೆಯ ಮೇಲೆ ಕಲ್ಲೆಸೆದಿದ್ದಾರೆ.