ಮಂಡ್ಯ : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿ ಶಾಲಾ ಬಸ್ ತಡೆದು ಯುವಕರಿಬ್ಬರ ಪುಂಡಾಟ ನಡೆಸಿರುವ ಘಟನೆ ವರದಿಯಾಗಿದೆ. ಶಾಲಾ ಬಸ್ ಗೆ ಬೈಕ್ ಅಡ್ಡ ನಿಲ್ಲಿಸಿ ಬಸ್ ಚಾಲಕನಿಗೆ ಯುವಕರಿಬ್ಬರ ಆವಾಜ್ ಹಾಕಿದ್ದಾರೆ.
ವಡ್ಡಹಳ್ಳಿ ಗ್ರಾಮದ ಕಿರಣ್ ಹಾಗು ಗಿರೀಶ್ ಎಂಬುವರಿಂದ ಬಸ್ ಅಡ್ಡಗಟ್ಟಿ ಕಿರಿಕ್ ಮಾಡಿದ್ದಾರೆ. ವಿದ್ಯಾರ್ಥಿನಿ ಕೆಳಗಿಳಿಸದಿದ್ದಕ್ಕೆ ಬಸ್ ಚಾಲಕನಿಗೆ ಬಸ್ ನಿಲ್ಲಿಸಿ ಆವಾಜ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.ಮದ್ಯ ಕುಡಿದು ಶಾಲಾ ಬಸ್ ಅಡ್ಡಗಟ್ಟಿ ಬೆದರಿಕೆ ಹಾಕಿರೋ ಬಗ್ಗೆ ಚಾಲಕ ಆರೋಪ ಕೇಳಿಬಂದಿದೆ.
ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿ ಕೆಳಗಿಸುವಂತೆ ಪುಂಡರ ಬೆದರಿಕೆ ಹಾಕಿದ್ದಾರೆ. ಪುಂಡರಿಬ್ಬರ ಪುಂಡಾಟಿಕೆ ವಿಡಿಯೋದೊಂದಿಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಯುವಕರ ಪುಂಡಾಟಿಕೆಯ ವಿಡಿಯೋ ವೈರಲ್ ಆಗ್ತಿದ್ದಂತೆ ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಗಳ ಬಂಧಿಸಿ ಕ್ರಮ ವಹಿಸಿರುವುದಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಕಟಣೆ ಮೂಲಕ ಸ್ಪಷ್ಟನೆ.








