ಚಿಕ್ಕಬಳ್ಳಾಪುರ : ರಸ್ತೆ ಬದಿಯಲ್ಲಿ ನಿಂತಂತಹ ಲಾರಿಗೆ ವೇಗವಾಗಿ ಬಂದಂತಹ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಕಾಲಿನಲ್ಲಿ ಚಲಿಸುತ್ತಿದ್ದ ದಂಪತಿಗಳು ಸೇರಿದಂತೆ ಇಬ್ಬರು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆ ಬಾವಿ ಬಳಿ ನಡೆದಿದೆ.
ಗಾಯಗೊಂಡವರನ್ನು ತುಮಕೂರು ಜಿಲ್ಲೆಯ ಪಾವಗಡದ ರೊಪ್ಪ ಗ್ರಾಮದ ಪವನ್ ಹಾಗೂ ಮಮತಾ ದಂಪತಿ ಸೇರಿದಂತೆ ಅವರ ಮಕ್ಕಳಾದ ವಿಶ್ವಾಸ್ ಹಾಗೂ ಶುಭ್ರತ್ ಎಂದು ತಿಳಿದುಬಂದಿದೆ. ಪಾಂಡಿಚೆರಿ ಪ್ರವಾಸಕ್ಕೆ ಹೋಗಿ ಬರುವಾಗ ಈ ಒಂದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಗನ ಪರಿಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.