ದಾವಣಗೆರೆ : ವಕ್ಫ್ ಬಿಲ್ ವಿರುದ್ಧ ಬೀದಿಗೆ ಇಳಿಯುವಂತೆ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಕಬೀರ್ ಖಾನ್ ಪ್ರಚೋದನಾ ಕಾರ್ಯ ಭಾಷಣ ಮಾಡಿದ್ದಾರೆ. ದಾವಣಗೆರೆ ಪೊಲೀಸರಿಂದ ಇದೀಗ ಆರೋಪಿ ಕಬೀರ್ ಖಾನ್ ಗೆ ಹುಡುಕಾಟ ನಡೆಸುತ್ತಿದ್ದು ಈಗಾಗಲೇ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ವಕ್ಫ್ ಬಿಲ್ ವಿರುದ್ಧ ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಕಬೀರ್ ಖಾನ್ ಬೀದಿಗೆ ಇಳಿಯುವಂತೆ ಪ್ರಚೋದನೆ ಭಾಷಣ ಮಾಡಿದ್ದಾರೆ. ಈ ಸಂಬಂಧ ಈಗಾಗಲೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದು, ಇನ್ನು ವಿಡಿಯೋ ಮಾಡಿದಂತ ಮಾಜಿ ಕಾರ್ಪೊರೇಟರ್ ಕಬೀರ್ ಖಾನ್ ಬಂಧನಕ್ಕೆ ಇದೀಗ ಬಲೆ ಬೀಸಿದ್ದಾರೆ.