ದಕ್ಷಿಣಕನ್ನಡ : ಕಳೆದ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಪಕ್ಷಿಕೆರೆ ಗ್ರಾಮದಲ್ಲಿ ಹೋಟೆಲ್ ಉದ್ಯಮಿ ಕಾರ್ತಿಕ್ ಭಟ್ ಅವರು ತನ್ನ ಪತ್ನಿ ಹಾಗೂ ಮಗುವನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಆ ಕುರಿತು ತನಿಖೆ ನಡೆಸುವ ವೇಳೆ ಅವರಿಗೆ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನ ಪ್ರಕಾರ ಪೊಲೀಸರು ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಸಹೋದರಿ ಕಣ್ಮಣಿಯನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ದೊರೆತಿರುವ ಡೆತ್ ನೋಟ್ ನಲ್ಲಿ ಕಾರ್ತಿಕ್ ಭಟ್ ಅವರು, ಕೌಟುಂಬಿಕ ಕಲಹದ ಬಗ್ಗೆ ಉಲ್ಲೇಖಿಸಿದ್ದಾರೆ. ತನ್ನ ತಂದೆ ತಾಯಿ ಹಾಗೂ ಸಹೋದರಿ ವಿರುದ್ಧ ಕಾರ್ತಿಕ್ ಭಟ್ ಆರೋಪಿಸಿದ್ದಾರೆ. ಇವರೇ ನಮ್ಮ ಸಂಸಾರ ಹಾಳು ಮಾಡಿದರು. ಇಂತಹ ಅಪ್ಪ-ಅಮ್ಮ ಯಾರಿಗೂ ಸಿಗಬಾರದು. ಅತ್ತೆ ಮಾವ ನಮ್ಮ ಶವ ಸಂಸ್ಕಾರ ಮಾಡಬೇಕೆಂದು ಕಾರ್ತಿಕ್ ಬರೆದಿದ್ದಾರೆ. ಇದೀಗ ಕಾರ್ತಿಕ್ ತಂದೆ ತಾಯಿ ಸೋದರಿ ವಿರುದ್ಧ ಪ್ರಿಯಾಂಕ ಪೋಷಕರು ದೂರು ದಾಖಲಿಸಿದ್ದಾರೆ.
ಕಾರ್ತಿಕ್ ಪತ್ನಿ ಮಗು ಕೊಲೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಪ್ರಿಯಾಂಕ & ಮಗು ಕೊಲೆ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಅತ್ತೆ ಮಾವನ ಕಿರುಕುಳದಿಂದ ಈ ದುರಂತ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ.ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಪ್ರಿಯಾಂಕ ಪೋಷಕರು ಆಗ್ರಹಿಸಿದ್ದಾರೆ. ಪಕ್ಷಿಕೆರೆ ಗ್ರಾಮದ ಮನೆಯಲ್ಲಿ ಪತ್ನಿ ಮಗುವನ್ನು ಕಾರ್ತಿಕ್ ಭಟ್ ಕೊಂದಿದ್ದರು. ಬಳಿಕ ಅವರು ಕೂಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಉದ್ಯಮಿ ಕಾರ್ತಿಕ್ ಭಟ್ ತಾಯಿ ಹಾಗೂ ಸಹೋದರಿಯನ್ನು ಅರೆಸ್ಟ್ ಮಾಡಿದ್ದಾರೆ