ಮೈಸೂರು : ಬಾಲಕಿಯರನ್ನ ವೇಶ್ಯಾವಾಟಿಕೆಗೆ ತಳುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೈಸೂರಿನ ವಿಜಯನಗರ ಠಾಣೆ ಪೋಲಿಸರಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ. ಶೋಭಾ ಹಾಗೂ ತುಳಸಿಕುಮಾರ್ ಎನ್ನುವ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಒಡನಾಡಿ ಸಂಸ್ಥೆಯ ಮಾಹಿತಿಯನ್ನು ಆಧರಿಸಿ ವಿಜಯನಗರ ಠಾಣೆ ಪೋಲೀಸರು ಈ ಒಂದು ಕಾರ್ಯಾಚರಣೆ ನಡೆಸಿದ್ದಾರೆ.ವಾಟ್ಸಪ್ ವಿಡಿಯೋ ಮೂಲಕ ಬಾಲಕಿಯನ್ನು ಆರೋಪಿಗಳು ತೋರಿಸಿದ್ದರು.ಆರೋಪಿಗಳು 12 ರಿಂದ 13 ವರ್ಷದ ಬಾಲಕಿ ತೋರಿಸಿ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪೊಲೀಸರು ಇಬ್ಬರು ಬಾಲಕಿಯರನ್ನು ರಕ್ಷಿಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.