ಚಾಮರಾಜನಗರ : ತೋಟದ ಮನೆಯಲ್ಲಿ ಗೃಹಿಣಿ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಚಾಮರಾಜನಗರ ತಾಲೂಕಿನ ಡೋಲ್ಲಿಪುರ ಬಳಿ ಶುಭಾ (38) ಎನ್ನುವ ಮಹಿಳೆಯ ಭೀಕರ ಕೊಲೆಯಾಗಿತ್ತು. ಪತ್ನಿ ಶುಭಾಳನ್ನು ಪತಿ ಮಹೇಶ್ ಕೊಲೆ ಮಾಡಿ ಡ್ರಾಮ ಮಾಡಿದದ್ದು ಇದೀಗ ಬೆಳಕಿಗೆ ಬಂದಿದೆ.
ಪತ್ನಿ ಪ್ರಗ್ನೆಂಟ್ ಆದಳು ಅನ್ನೋ ಕಾರಣಕ್ಕೆ ಮಹೇಶ್ ಪತ್ನಿ ಶುಭಾಳನ್ನು ಭೀಕರವಾಗಿ ಕೊಲೆ ಮಾಡಿದ್ದ. ಜೂನ್ 30ರಂದು ಡೋಲ್ಲಿಪುರದ ಎಚ್ ಡಿ ಫಾರೆಸ್ಟ್ ನಲ್ಲಿ ಈ ಒಂದು ಘಟನೆ ನಡೆದಿತ್ತು. ಪತ್ನಿಕೊಂದು ಬಳಿಕ ಏನು ಗೊತ್ತೇ ಇಲ್ಲ ಎಂಬಂತೆ ಪತಿ ಮಹೇಶ್ ಭಾರಿ ಡ್ರಾಮ ಮಾಡಿದ್ದ.ಮಹೇಶನ ಶರ್ಟ್ ಮೇಲಿದ್ದ ರಕ್ತದ ಕಲೆಯಿಂದ ಸುಳಿವು ಸಿಕ್ಕಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಪತ್ನಿ ಶುಭಾಳನ್ನು ಕೊಲೆ ಮಾಡಿದ್ದು ಇದೀಗ ಬೆಳಗೆಗೆ ಬಂದಿದೆ. ತೋಟದ ಮನೆಯಲ್ಲಿ ಪತಿ ಅತ್ತೆಯ ಜೊತೆಗೆ ಶುಭ ವಾಸವಿದ್ದಳು. ಸದ್ಯ ಆರೋಪಿ ಮಹೇಶನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.