ಬೆಂಗಳೂರು : ಕೇವಲ 58 ದಿನಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹನಿಮೂನ್ ವೇಳೆ ಜಗಳ ಶುರುವಾಗಿದ್ದು, ಪೋಷಕರ ಮನೆಗೆ ಮರಳಿದ್ದ ಗಾನವಿ, ಬ್ರೈನ್ ಡೆಡ್ ಆಗಿ ಕೊನೆಯುಸಿರೆಳೆದಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪತಿ ಸೂರಜ್ ಹಾಗೂ ಕುಟುಂಬಸ್ಥರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಗಾನವಿ ಪೋಷಕರು ವಿರುದ್ಧ ದೂರು ದಾಖಲಾಗಿದೆ. ಗಾನವಿ ಆತ್ಮಹತ್ಯೆ ಬೆನ್ನಲ್ಲೆ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾನವಿ ಪೋಷಕರು ಕೇಸ್ ದಾಖಲಿಸುತ್ತೀದ್ದಂತೆ ಸೂರಜ್ ಹಾಗು ತಾಯಿ ಜಯಂತಿ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಕಿರುಕುಳ ಆರೋಪದಿಂದ ಮನನೊಂದು ಲಾರ್ಡ್ಸ್ ನಲ್ಲಿ ಆತ್ಮಹತ್ಯೆಗೆ ಸೂರಜ್ ಶರಣಾಗಿದ್ದಾನೆ ಸದ್ಯ ಶಿವರಾಜ್ ಭಾವ ಗಾನವಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಸೂರಜ್ ಭಾವ ರಾಜ್ ಕುಮಾರ್ ದೂರು ನೀಡಿದ್ದಾರೆ ಸೂರಜ್ ಸಾವಿಗೆ ರುಕ್ಮಿಣಿ ರಾಧಾ ಬಾಬುಗೌಡ ಹಾಗೂ ಸತೀಶ್ ಎನ್ನುವವರೇ ಕಾರಣರಾಗಿದ್ದಾರೆ ಮಾನಹಾನಿ ಮತ್ತು ಸುಳ್ಳು ಆರೋಪ ಮಾಡಿ ಸಾವಿಗೆ ಕಾರಣರಾಗಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರಣ್ಯಪುರ ಠಾಣೆಯಲ್ಲಿ ರಾಜಕುಮಾರ್ ದೂರು ನೀಡಿದ್ದಾರೆ.








