ಮೈಸೂರು : ಮೈಸೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಬಾಲಕನನ್ನು ರಕ್ಷಿಸಲು ಹೋದ ಸಹೋದರರಿಬ್ಬರು ನಿರುಪಾಲಾಗಿರುವ ಘಟನೆ ವರದಿಯಾಗಿದೆ. ಮೈಸೂರಿನ ಬಡಗಲಹುಂಡಿಯಲ್ಲಿ ಈ ಒಂದು ದುರಂತ ಸಂಭವಿಸಿದ್ದು, ವರುಣ ನಾಲೆ ನೀರಿನಲ್ಲಿ ಬಾಲಕನನ್ನು ರಕ್ಷಿಸಲು ಹೋಗಿ ಸಹೋದರರು ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ನಂದನ್ (25) ಮತ್ತು ರಾಕೇಶ್ (20) ಎಂದು ತಿಳಿದುಬಂದಿದೆ. ವರುಣ ನಾಲೆಯಲ್ಲಿ ಬಾಲಕನನ್ನು ಕಾಪಾಡಕ್ಕೆ ಹೋಗಿದ್ದಾರೆ ಆದರೆ ಇಬ್ಬರು ಕೂಡ ಸಾವನಪ್ಪಿದ್ದಾರೆ. ಮರದ ಕೊಂಬನ್ನು ಹಿಡಿದು ಜೀವ ಉಳಿಸಿ ಎಂದು ಬಾಲಕ ಹೊರಡುತ್ತಿದ್ದ. ಬಾಲಕನ ರಕ್ಷಣೆಗೆ ಇಬ್ಬರು ಸಹೋದರರು ನಾಲೆಗೆ ಇಳಿಯುತ್ತಾರೆ. ಆದರೆ ಇಬ್ಬರು ಮೃತಪಟ್ಟಿದ್ದಾರೆ. 15 ದಿನಗಳ ಹಿಂದೆ ಅಷ್ಟೇ ನಂದನ್ ಪ್ರೀತಿಸಿದ ಯುವತಿಯ ಜೊತೆಗೆ ಮದುವೆಯಾಗಿದ್ದ. ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.








