ಬೆಂಗಳೂರು : ರಾಜ್ಯ ಸರ್ಕಾರದಲ್ಲಿನ ಅಧಿಕಾರ ಹಂಚಿಕೆ ಗೊಂದಲದ ಬಗ್ಗೆ ನಾಳೆ, ನಾಡಿದ್ದು ಹೈಕಮಾಂಡ್ ಸಭೆ ಇದೆ. ಆಗ ಮಾತನಾಡಿ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಸಭೆ ಇದೆ. ಬಿಹಾರ ಫಲಿತಾಂಶ ಬಗ್ಗೆಯೂ ಚರ್ಚೆ ನಡೆಯಲಿದೆ. ಆಗ ರಾಜ್ಯದ ಗೊಂದಲದ ಬಗ್ಗೆ ಮಾತನಾಡಿ ಬಗೆಹರಿಸುತ್ತಾರೆ. ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಗೊಂದಲದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಮಲ್ಲಿಕಾರ್ಜುನ ಖರ್ಗೆಯವರು ಒಂದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬರುತ್ತಿದ್ದಾರೆ ಎಂದರು.
ಸಿಎಂ ಎರಡೂವರೆ ವರ್ಷಕ್ಕೆ ಅಂತ ಆಗಿಲ್ಲವಾ ಎಂಬ ಶಾಸಕ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಪ್ರಶ್ನೆ ಮಾಡಲಿ, ಮಾಧ್ಯಮದಲ್ಲಿ ಅಲ್ಲ. ಯಾರ್ಯಾರಿಗೆ ಏನೇನು ಜವಾಬ್ದಾರಿ ಕೊಡಬೇಕು ಎಂಬುದು ಸಿಎಲ್ಪಿಯಲ್ಲಿ ತೀರ್ಮಾನ ಆಗಿಲ್ಲ. ಸಿಎಲ್ಪಿ ಆಗಿದ್ದು ಹೇಗೆ? ಬಿ ಫಾರಂ ಕೊಟ್ಟಿರುವುದು ಪಾರ್ಟಿ ಅಲ್ವಾ? ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ.
ನಾನು ಮಾತಾಡಿದ ತಕ್ಷಣ ಬೆಂಕಿ ಉರಿದು ಬಿಡುತ್ತಾ? ಆಡಳಿತದ ಮೇಲೆ ಪರಿಣಾಮ ಬೀರಬಾರದು. ಎಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡಬೇಕು. ಸಿದ್ದರಾಮಯ್ಯ ನಮ್ಮ ಸಿಎಂ. ಡಿಕೆಶಿ ನಮ್ಮ ಡಿಸಿಎಂ, ಅಧ್ಯಕ್ಷರು. ಇವರ ಹೊರತಾಗಿ ಹೈಕಮಾಂಡ್ ತೀರ್ಮಾನಿಸಬೇಕು. ಹೊಸ ಅಧ್ಯಕ್ಷರ ಬಗ್ಗೆಯೂ ಅವರೇ ತೀರ್ಮಾನಿಸಬೇಕು ಎಂದು ಹೇಳಿದರು.








