ಬೆಂಗಳೂರು : ಗ್ರಾಮೀಣ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮ ಪಂಚಾಯತಿಗಳಲ್ಲಿ ಜನನ, ಮರಣ ನೋಂದಣಿ ಸೇವೆ ಲಭ್ಯ. ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಜನನ, ಮರಣ, ನಿರ್ಜೀವ ಜನನನಗಳನ್ನು ನಿಮ್ಮ ಗ್ರಾಮಪಂಚಾಯಿತಿಯಲ್ಲೇ ನೋಂದಣಿ ಮಾಡಿಸುವುದು ಈಗ ಮತ್ತಷ್ಟು ಸುಲಭವಾಗಿದ್ದು, ಕೆಳಕಂಡ 9 ಸೇವೆಗಳು ಈಗ ಗ್ರಾಮಪಂಚಾಯಿತಿಯಲ್ಲೇ ಲಭ್ಯ.
1. ಜನನ ನೋಂದಣಿ
2. ಜನನ ಪ್ರಮಾಣ ತಿದ್ದುಪಡಿ
3.ಜನನ ಪ್ರಮಾಣ ಪತ್ರ ವಿತರಣೆ
4. ಮಗುವಿನ ಹೆಸರು ಸೇರ್ಪಡೆ
5.ಮರಣ ನೋಂದಣಿ
6.ಮರಣ ಪ್ರಮಾಣ ಪತ್ರ ತಿದ್ದುಪಡಿ
7. ಮರಣ ಪ್ರಮಾಣ ಪತ್ರ ವಿತರಣೆ
8. ನಿರ್ಜೀವ ಜನನ ನೋಂದಣಿ
9.ನಿರ್ಜೀವ ಜನನ ಪ್ರಮಾಣ ಪತ್ರ ವಿತರಣೆ