ಬೆಂಗಳೂರು : ಅಗಸ್ಟ್ ಅಂತ್ಯಕ್ಕೆ ರಾಜ್ಯದಲ್ಲಿ ಮತ್ತೆ ಟೋಯಿಂಗ್ ಆರಂಭ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾತನಾಡಿ ಬೆಂಗಳೂರಿನಲ್ಲಿ ಟೋಯಿಂಗ್ ಗೆ ಗುತ್ತಿಗೆ ಕೊಡಲ್ಲ ಈ ಬಾರಿ ಇಲಾಖೆಯಿಂದಲೇ ಟೋಯಿಂಗ್ ನಡೆಸಲಾಗುತ್ತದೆ ಎಂದು ತಿಳಿಸಿದರು.
ರಸ್ತೆಯಲ್ಲಿ ನಿಲ್ಲಿಸುವ ವಾಹನಗಳ ಟೋಯಿಂಗ್ ಮಾಡಲಾಗುವುದು ಸಾರ್ವಜನಿಕರ ಜೊತೆಗೆ ಪೊಲೀಸರು ಮಾನವೀಯತೆಯಿಂದ ಹಾಗೂ ಶಾಂತ ರೀತಿಯಿಂದ ವರ್ತಿಸುವಂತೆ ಸೂಚಿಸಿದ್ದೇವೆ ಎಂದರು. ಇನ್ನು ಧರ್ಮಸ್ಥಳ ಕೇಸ್ ಕುರಿತು ಮಾತನಾಡಿ, ವರದಿ ಪೂರ್ಣ ಆಗುವವರೆಗೂ ಧರ್ಮಸ್ಥಳದ ತನಿಖೆಯ ಬಗ್ಗೆ ಮಾತನಾಡಲ್ಲ ಸದ್ಯಕ್ಕೆ ನಾವು ಚರ್ಚೆ ಮಾಡುವುದಿಲ್ಲ ತನಿಖೆ ಸಂಪೂರ್ಣ ಆಗಲಿ ಅದರಲ್ಲಿ ನಮಗೇನು ಆಸಕ್ತಿ ಇಲ್ಲ ಸತ್ಯ ಹೊರಗಡೆ ಬರೋದು ಅಷ್ಟೇ ಮುಖ್ಯವಾಗಿದೆ ಎಂದು ಗ್ರಹದ ಪರಮೇಶ್ವರ ತಿಳಿಸಿದರು.