ನವದೆಹಲಿ: ಭಾರತದ ವಿವಿಧ ರಾಜ್ಯಗಳ ಆರ್ಥಿಕ ಪರಿಸ್ಥಿತಿಯ ಕುರಿತು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಆ ರಾಜ್ಯದ ಸಾಲದ ಹೊರೆಯ ಕುರಿತು ರಾಜಕೀಯ ವಲಯದಲ್ಲಿ ತೀವ್ರ ವಾಗ್ವಾದಗಳು ಏರ್ಪಟ್ಟಿವೆ.
ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಸಾಲ ಮಾಡಿರುವ ರಾಜ್ಯಗಳು ಯಾವುವು? ಯಾವ ರಾಜ್ಯಗಳ ಆರ್ಥಿಕ ಸ್ಥಿತಿ ಆತಂಕಕಾರಿಯಾಗಿದೆ? ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸಾಲದ ಪಟ್ಟಿಯಲ್ಲಿ ತಮಿಳುನಾಡು ಪ್ರಥಮ!
ಭಾರತದ ರಾಜ್ಯಗಳ ಪೈಕಿ ತಮಿಳುನಾಡು ಅತಿ ಹೆಚ್ಚು ಸಾಲದ ಹೊರೆ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಆದರೆ, ಕೇವಲ ಸಾಲದ ಮೊತ್ತವನ್ನು ನೋಡಿ ಆರ್ಥಿಕ ಸ್ಥಿತಿಯನ್ನು ಅಳೆಯಲಾಗದು. ರಾಜ್ಯದ ಒಟ್ಟು ಉತ್ಪನ್ನಕ್ಕೆ (GSDP) ಹೋಲಿಸಿದರೆ ಸಾಲದ ಪ್ರಮಾಣ ಎಷ್ಟಿದೆ ಎಂಬ ಆಧಾರದ ಮೇಲೆ ಆರ್ಥಿಕ ಅಪಾಯವನ್ನು ಲೆಕ್ಕಹಾಕಲಾಗುತ್ತದೆ.
ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 10 ರಾಜ್ಯಗಳು (ರೂಪಾಯಿಗಳಲ್ಲಿ):








