ಬೆಂಗಳೂರು : ನವೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ ಎಂಬ ವಿಚಾರವಾಗಿ ಅಂತಹ ಭಾರಿ ಬದಲಾವಣೆ ಏನು ಆಗಲ್ಲ ಆದರೆ ಸ್ವಲ್ಪ ಬದಲಾವಣೆ ಆದರೆ ಆಗಬಹುದು ಭಾರಿ ಬದಲಾವಣೆಯ ರೀತಿ ಆಗುತ್ತದೆ ಅಂತ ಏನು ಅನಿಸುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದಂತಹ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಇನ್ನು ಸರ್ಕಾರದ ವಿರುದ್ಧ ಶಾಸಕ ರಾಜು ಕಾಗೆ ಅಸಮಾಧಾನ ಹೊರ ಹಾಕಿರುವ ವಿಚಾರವಾಗಿ, ರಾಜು ಕಾಗೆ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕೇವಲ ಅನುದಾನ ವರ್ಗಾವಣೆಗೆ ಅಸಮಾಧಾನ ಅಂತ ಏನಿಲ್ಲ. ನೀರಾವರಿ ಯೋಜನೆಗಳ ಬಗ್ಗೆಯೂ ಬಹಳಷ್ಟು ಬಾರಿ ಹೇಳಿದ್ದಾರೆ. ನಾವು ನೀರಾವರಿ ಅನುದಾನ ವಿಚಾರವಾಗಿ ಮಾಹಿತಿ ನೀಡಿದ್ದೇವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಸಿಎಂ ಸಿದ್ದರಾಮಯ್ಯ ಮಾತನಾಡಬಹುದು ಎಂದರು.
ನೀರಾವರಿ ಇಲಾಖೆಯಲ್ಲಿ 26,000 ಕೋಟಿ ಅನುದಾನವಿದೆ. ಎಲ್ಲವನ್ನು ಸರಿಪಡಿಸಲು ಹೈಕಮಾಂಡ್ ನಾಯಕರು ಹೇಳಿದರು. ವೈಯಕ್ತಿಕವಾಗಿ ಶಸ್ತ್ರ ತ್ಯಾಗ ಏನಿಲ್ಲ. ಯುದ್ಧ ಇದ್ದಾಗ ಶಸ್ತ್ರ ಹಿಡಿಯಬೇಕು ಸುಮ್ಮನೆ ಹಿಡಿಯಬಾರದು. ಅಸಮಾಧಾನ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿ ಇದೆ. ಸಿ ಎಮ್ ಡಿ ಸಿಎಂ ಶಾಸಕರ ಸಮಸ್ಯೆ ಸರಿಪಡಿಸಬೇಕು, ಸರಿಪಡಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.