ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬಂದಿತ್ತು. ಅಲ್ಲದೆ ದಲಿತ ಸಿಎಂ ಕುರಿತಂತೆ ಕೂಡ ಕೂಗು ಕೇಳಿಬಂದಿತ್ತು ಈ ವಿಚಾರವಾಗಿ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನಂತೆ ಸಾಕಷ್ಟು ಜನರು ಸಿಎಂ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇ ಸಿಎಂ ಅಂತ ನಾನು ಎಲ್ಲಿಯೂ ಹೇಳಿಲ್ಲ. ಆದರೆ ಪಕ್ಷದಲ್ಲಿ ನನ್ನಂತೆ ಮುಖ್ಯಮಂತ್ರಿ ಆಗುವ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಾಳೆ ಹಾಸನದಲ್ಲಿ ಸ್ವಾಭಿಮಾನ ಸಮಾವೇಶ ನಡೆಯುತ್ತಿದ್ದು, ಈ ವಿಚಾರದ ಕುರಿತಾಗಿ ಮಾತನಾಡಿದ ಅವರು, ಅಹಿಂದ ಅಂದರೆ ಕಾಂಗ್ರೆಸ್, ಅಹಿಂದದವರು ಕಾಂಗ್ರೆಸ್ ಬಿಟ್ಟಿಲ್ಲ. ನಾಯಕ, ವಿಚಾರ, ಸಿದ್ದಾಂತ ಎಲ್ಲವೂ ಒಂದೇ. ಬ್ಯಾನರ್ ಚೇಂಜ್ ಆಗಿದೆ ಅಷ್ಟೇ. ಕಾರ್ಯಕ್ರಮ ಮಾಡಿದರೆ ಹೆಸರು ಯಾರಿಗೆ ಬರಬೇಕೋ ಬರುತ್ತೆ. ಕಾರ್ಯಕ್ರಮ ಡಿಕೆ ಶಿವಕುಮಾರ್ ಮಾಡಿದರು ಕೂಡ ಪಕ್ಷಕ್ಕೆ ಲಾಭ ಅಲ್ಲವೇ? ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿದ್ದಾರೆ ಲಾಭ ಪಕ್ಷಕ್ಕೆ ಆಗುತ್ತದೆ ಎಂದು ತಿಳಿಸಿದರು.
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಡಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ, 11 ವರ್ಷದ ಅಕ್ರಮ ಹೇಳಿದ್ದಾರೆ. ಆದರೆ ಸರ್ಕಾರ ಬದಲಾಗಿದೆ, ಇಡಿ ತನಿಖೆಯೇ ಪ್ರಶ್ನಾರ್ಹವಾಗಿದೆ. ಅಕ್ರಮ ಹಣ ವರ್ಗಾವಣೆಯ ಬಗ್ಗೆ ಇಡಿ ತಂಡ ತನಿಖೆ ಮಾಡಬೇಕು. ಈಗ ಯಾಕೆ ಇಡಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ ಗೊತ್ತಿಲ್ಲ. ಲೋಕಾಯುಕ್ತ ಅದರ ಪಾಡಿಗೆ ತನಿಖೆ ಮಾಡುತ್ತಿದೆ. ಈ ಹಂತದಲ್ಲಿ ಏಕೆ ಪತ್ರ ಬರೆದಿದ್ದಾರೆ ಅಂತ ನೋಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.