ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಾರ್ಕಳದ ಉಮಿಕಲ್ ಬೆಟ್ಟದ ಮೇಲಿರುವ ಪರಶುರಾಮ್ ಥೀಮ್ ಪಾರ್ಕ್ ಮೇಲಿನ ತಾಮ್ರದ ಹೊದಿಕೆ ಕಳ್ಳತನವಾಗಿತ್ತು.
ಇದೀಗ ಮಂಗಳೂರು ಮೂಲದ ಆರಿಫ್ (37) ಹಾಗೂ ಅಬ್ದುಲ್ ಹಮೀದ್ (32) ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಾರ್ಕ್ ಕಟ್ಟಡದ ಮೇಲ್ಚಾವಣಿಗೆ ತಾಮ್ರದ ಹೊದಿಕೆ ಹಾಕಿಲಾಗಿದ್ದು ಅದನ್ನು ಇವರಿಬ್ಬರು ಕಳ್ಳತನ ಮಾಡಿದ್ದರು. ಕೇಸ್ ಗಂಭೀರ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಮೂರು ತಂಡ ರಚನೆ ಮಾಡಿ ಶೋಧ ನಡೆಸಿದ್ದರು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೋಧಕಾರ್ಯ ನಡೆಸಿದ್ದರು.ಇದೀಗ ಬಂಧಿತ ಆರೋಪಿಗಳಿಂದ 51 ಕೆಜಿ ತಾಮ್ರದ ಹೊದಿಕೆ ಜಪ್ತಿ ಮಾಡಿದ್ದಾರೆ.ಜೊತೆಗೆ ಎರಡು ಸೀಲಿಂಗ್ ಫ್ಯಾನ್, ಕೃತಕ್ಕೆ ಬಳಸಿದ ಗೂಡ್ಸ್ ಆಟೋ ಮತ್ತು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇತರೆ ಆರೋಪಿಗಳ ಪತ್ತೆಗೆ ಕಾರ್ಕಳ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.








