ಬೆಂಗಳೂರು : ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ಹೆಚ್ಚುವರಿ ಎಸ್ಪಿ ಆಗಿದ್ದ ನಾರಾಯಣ ಭರಮನಿ ಅವರಿಗೆ ಗದರಿ ಕೈ ಎತ್ತಿ ಹೊಡೆಯಲು ಮುಂದಾಗಿದ್ದರು. ಅದಾದ ಬಳಿಕ ಸಿಎಂ ನನ್ನು ಅವಮಾನಿಸಿದ್ದಾರೆ ಎಂದು ಬರಮನಿ ರಾಜೀನಾಮೆಗೆ ಮುಂದಾಗಿದ್ದರು ಆದರೆ ಅವರು ಮತ್ತೆ ತಮ್ಮ ನಿರ್ಧಾರ ಬದಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಇದೀಗ ರಾಜ್ಯ ಸರ್ಕಾರ ಎಎಸ್‌ಪಿ ನಾರಾಯಣ ಭರಮನಿಗೆ ಮುಂಬಡ್ತಿ ನೀಡಿದ್ದು ಧಾರವಾಡ ಎಎಸ್ಪಿಯಾಗಿದ್ದ ನಾರಾಯಣ ಬರಮನಿ ಅವರಿಗೆ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆ ನೀಡಲಾಗಿದೆ. ಈ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಸಿಎಂ ಸಿದ್ದರಾಮಯ್ಯ ನಾರಾಯಣ ಭರಮನಿ ಮೇಲೆ ಕೈ ಎತ್ತಲು ಮುಂದಾಗಿದ್ದರು.
ಇದರಿಂದ ಮನನೊಂದು ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಬಳಿಕ ಹಿರಿಯ ಅಧಿಕಾರಿಗಳ ಮನವೊಲಿಕೆ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಕೆಯಿಂದ ಮತ್ತೆ ಕರ್ತವಕ್ಕೆ ಹಾಜರಾಗಿದ್ದರು.ಇದರ ಬೆನ್ನಲ್ಲೇ ಇದೀಗ ನಾರಾಯಣ ಬರಮನಿ ಅವರಿಗೆ ಮುಂಬಡ್ತಿ ನೀಡಿರುವು ಅಚ್ಚರಿಕೆ ಕಾರಣವಾಗಿದೆ.