ಬೀದರ್ : ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ನಿನ್ನೆ ಭಾರತ ಪಾಕಿಸ್ತಾನ್ ಮಧ್ಯ ಕದನ ವಿರಾಮ ಘೋಷಣೆಯಾಗಿತ್ತು. ಆದರೆ ನಿನ್ನೆ ರಾತ್ರಿ ಮತ್ತೆ ಪಾಕಿಸ್ತಾನ್ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದೀಗ ತಂಗಿಯ ಮದುವೆಗೆಂದು ಬಂದಿದ್ದ ಯೋಧನಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ತುರ್ತು ಕರೆ ಬಂದಿದ್ದರಿಂದ ಸೇವೆಗೆ ಯೋಧರೊಬ್ಬರು ಹಾಜರಾಗಿದ್ದಾರೆ.
ಹೌದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಯೋಧ ಬಸವಕಿರಣ ಬಿರಾದಾರ ಅವರು ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಏ.27ರಂದು ತಂಗಿಯ ಮದುವೆಗಾಗಿ ರಜೆ ಪಡೆದು ಊರಿಗೆ ಬಂದಿದ್ದರು.
ಸದ್ಯ ಭಾರತ-ಪಾಕಿಸ್ತಾನದ ಗಡಿ ಪಂಜಾಬ್‌ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ತುರ್ತು ಕರೆ ಬಂದಿದೆ. ಯೋಧನ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಕುಟುಂಬಸ್ಥರು ಶುಭ ಹಾರೈಸಿ ಸೇವೆಗೆ ಕಳುಹಿಸಿಕೊಟ್ಟಿದ್ದಾರೆ.