ಬೆಂಗಳೂರು : ಕನಕಪುರದಲ್ಲಿ ನಾಳೆ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ರದ್ದು ಮಾಡಿದ್ದಾರೆ. ಇಂದು, ನಾಳೆ ಸ್ವಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರವಾಹ ಹಮ್ಮಿಕೊಂಡಿದ್ದರು. ಏಕಾಏಕಿ ನಾಳಿನ ಜನಸ್ಪಂದನ ಕಾರ್ಯಕ್ರಮವನ್ನು ಡಿಕೆ ಶಿವಕುಮಾರ್ ರದ್ದುಗೊಳಿಸಿದ್ದಾರೆ.
ನಾಳೆಯಿಂದ ಮೂರು ದಿನಗಳ ಕಾಲ ಡಿಸಿಎಂ ಡಿಕೆ ಶಿವಕುಮಾರ್ ಅಲಭ್ಯರಾಗಿದ್ದು, ಅನ್ಯ ಕಾರ್ಯಗಳ ನಿಮಿತ್ಯ ನಾಳೆಯಿಂದ ಮೂರು ದಿನಗಳ ಕಾಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಲಭ್ಯರಾಗಿರಲಿದ್ದಾರೆ. ಇಂದು ಕೋಡಿಹಳ್ಳಿ ಶಿವಕುಮಾರ್ ಜನಸ್ಪಂದನಾ ಕಾರ್ಯಕ್ರಮ ನಡೆಸಿದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದರು.