ಬೆಳಗಾವಿ : ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 4000 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಕೆಲವಾದಿ ನಾರಾಯಣಸ್ವಾಮಿ ಟ್ವೀಟ್ ಮುಖಾಂತರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರವಾಗಿ ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಸದ್ಯದ ರಾಜ್ಯದ ಆರ್ಥಿಕ ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ತಿರುಗಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ 2023ರಲ್ಲಿ ಅಧಿಕಾರ ಬಿಟ್ಟುಕೊಟ್ಟ ಸಂದರ್ಭದಲ್ಲಿ 80,000 ಕೋಟಿ ಬಿಲ್ ಬಾಕಿ ಇತ್ತು. ಆಮೇಲೆ ಬಜೆಟ್ ನಲ್ಲಿ ಇರುವುದನೆಲ್ಲಾ ಅನುಮೋದನೆ ಮಾಡಿಕೊಂಡರು. ಬಜೆಟ್ ನಲ್ಲಿ ಇಲ್ಲದೆ ಇರುವಂತ ನಾಲ್ಕು ಲಕ್ಷ ಕೋಟಿ ಬಜೆಟೆ ಇಲ್ಲ ಆದರೂ ಅನುಮೋದನೆ ಮಾಡಿಕೊಂಡರು. ಅವರು ಮಾಡಿರುವಂತಹ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ. ನಮ್ಮ ಶಕ್ತಿ ಯೋಜನೆಯಲ್ಲಿ 11748 ಕೋಟಿ ಬಿಡುಗಡೆಯಾಗಿದೆ. ಇನ್ನು ನಾಲ್ಕು ಸಾವಿರ ಕೋಟಿ ಬಿಡುಗಡೆ ಆಗುತ್ತೆ.
ಆದರೆ ಬಿಜೆಪಿಯವರಿಗೆ ಒಂದು ಪ್ರಶ್ನೆ ಕೇಳುತ್ತೇನೆ ನೀವು ನಮಗೆ ಅಧಿಕಾರ ಬಿಟ್ಟುಕೊಟ್ಟಾಗ ರೂ.4,000 ಕೋಟಿ ಸಾಲ ಬಿಟ್ಟು ಹೋಗಿದ್ರಿ, ಯಾಕೆ ಬಿಟ್ಟು ಹೋದ್ರಿ? ಸಿಬ್ಬಂದಿಗಳು ಸ್ಟ್ರೈಕ್ ಮಾಡುತ್ತಿದ್ದರಲ್ಲ 30 ತಿಂಗಳು ಬಾಕಿ ಕೊಡಬೇಕೆಂದು ಆ 30 ತಿಂಗಳು ಅವರದೇ ಬಾಕಿ ಅವರು ಕೊಟ್ಟುಬಿಟ್ಟಿದ್ದಾರೆ, ಇವರು ಕೇಳುತ್ತಿರಲಿಲ್ಲ ನಮ್ಮ ಅವಧಿಯಲ್ಲಿ ಬಸ್ ತೆಗೆದುಕೊಂಡಿದ್ದೇವೆ. 2400 ಕೋಟಿ ಕೊಟ್ಟು ಹೊಸ ಬಸ್ ಖರೀದಿ ಮಾಡಿದ್ದೇವೆ.
ಇದಕ್ಕೆಲ್ಲ ರಾಜ್ಯ ಸರ್ಕಾರವೇ ಹಣ ಕೊಟ್ಟಿದ್ದು ಆದರೆ ಬಿಜೆಪಿ ಅಧಿಕಾರದಲ್ಲಿದ್ದ ಒಂದು ಬಸ್ಸು ತೆಗೆದುಕೊಂಡಿಲ್ಲ. ನಮ್ಮ ಅವಧಿಯಲ್ಲಿ 10 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿಕೊಡಿದ್ದೇವೆ. ಆದರೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ನೇಮಕಾತಿ ಮಾಡಿಕೊಂಡಿಲ್ಲ. ಈ ವರ್ಷ 2025 26ನೇ ವರ್ಷದಲ್ಲಿ ಮುಖ್ಯಮಂತ್ರಿ ಹಣ ಕೊಟ್ಟಿದ್ದಾರೆ. ಇಷ್ಟೆಲ್ಲ ನಮ್ಮ ಅವಧಿಯಲ್ಲಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.








