ಚಾಮರಾಜನಗರ : ಸಾಮಾನ್ಯವಾಗಿ ಕಳ್ಳರು ಮನೆ, ಬ್ಯಾಂಕ್ ಗಳನ್ನು ದರೋಡೆ ಮಾಡುವುದನ್ನು ಕೇಳಿದ್ದೇವೆ. ಆದರೆ ಚಾಮರಾಜನಗರದಲ್ಲಿ ಅಚ್ಚರಿ ಘಟನೆ ನಡೆದಿದ್ದು, ಪೊಲೀಸ್ ಠಾಣೆ ನಿಲ್ಲಿಸಿದ ಬೈಕ್ ಒಂದನ್ನೇ ಚಾಲಾಕಿ ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಹೌದು ಕಳ್ಳನೊಬ್ಬ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಚಾಲಾಕಿ ಕಳ್ಳ ಬೈಕ್ ಕದಿಯುತ್ತಿರುವ ದೃಶ್ಯ ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಡರಾತ್ರಿ ಸುಮಾರು 2 ಗಂಟೆಗೆ ಈ ಒಂದು ಘಟನೆ ನಡೆದಿದ್ದು, ನಗರದ CEN ಠಾಣೆಗೆ ನುಗ್ಗಿದ್ದಾನೆ. ಅಲ್ಲೇ ಇದ್ದಂತಹ ಬೈಕ್ ಅನ್ನು ಕದ್ದು ಪರಾರಿ ಆಗಿದ್ದಾನೆ.ಈ ಬೈಕ್ ಎನ್ ಡಿ ಪಿಎಸ್ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬೈಕ್ ಆಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.