ಬೆಳಗಾವಿ : ಇಂದು ಸುವರ್ಣ ಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕೆಲವು ರೈತರು ಭೇಟಿಯಾಗಲು ಬಂದಿದ್ದರು. ತಮ್ಮ ಊರಿನ ಕನ್ನಡ ಶಾಲೆಯ ಅಭಿವೃದ್ಧಿ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಲು ಭೇಟಿಯಾಗಲು ಸುವರ್ಣಸುವುದಕ್ಕೆ ಬಂದಿದ್ದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ರೈತರು, ಗರಂ ಆಗಿದ್ದಾರೆ.
ಕನ್ನಡ ಶಾಲೆ ಅಭಿವೃದ್ಧಿಯ ಬಗ್ಗೆ ರೈತರು ಭೇಟಿಗೆ ಬಂದಿದ್ದರು ಸಚಿವರನ್ನು ಭೇಟಿ ಮಾಡಲು ಬಂದಾಗ ನಾನು ಎಲ್ಲ ಮಾಡಿದ್ದೀನಿ ಮೊದಲು ಹೊರಗೆ ಹೋಗಿ ಅಂತ ರೈತರಿಗೆ ಹೇಳಿದ್ದಾರೆ. ರೈತರನ್ನು ಸಿಬ್ಬಂದಿಗಳು ಕಚೇರಿಯಿಂದ ಹೊರಗಡೆ ಹಾಕಿದ್ದಾರೆ. ಆಗ ರೈತರು ಅವನೊಬ್ಬ ಶಿಕ್ಷಣ ಸಚಿವ ಗೂಂಡಾಗಳನ್ನು ಇಟ್ಟುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದಾನೆ ಎಂದು ಸಚಿವ ಮಧು ಬಂಗಾರಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಿವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.








