ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸರ್ಕಾರ ನಿರ್ಧರಿಸಿದ್ದು ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಒಂದು ರೀತಿ ತುಘಲಕ್ ಇದ್ದಂತೆ. ದೇಶದಲ್ಲಿ ಇವಿಎಂ ತಂದಿದ್ದು ರಾಜೀವ್ ಗಾಂಧಿ. ರಾಜೀವ್ ಗಾಂಧಿ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಟ್ರಾ? ಎಂದು ವಿಪಕ್ಷ ನಾಯಕ ಆರ್ ಅಶೋಕ ಪ್ರಶ್ನಿಸಿದರು.
ಮೊದಲೇ ಕಾಂಗ್ರೆಸ್ ಪಕ್ಷದವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ. ಈ ರೀತಿ ಆಡುತ್ತಿದ್ದರೆ ಅವರೇ ನಿಮ್ಮ ಗುರು, ದೇವರು ಆಗುತ್ತಾರೆ. ಅವರು ಮಾಡುವುದು ಅನಾಚಾರ ಮನೆಯ ಮುಂದೆ ಬೃಂದಾವನ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.








