ಯಾದಗಿರಿ : ಕಳೆದ ಎರಡು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮಾಚನೂರು ಎಂಬಲ್ಲಿ ಕುರಿ ಮೇಯಿಸಲು ತೆರಳಿದ ವೇಳೆ ಇಬ್ಬರು ಯುವಕರು ಭೀಮಾ ನದಿಯಲ್ಲಿ ನೀರು ಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 52 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಓರ್ವ ಯುವಕನ ಶವ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಎರಡು ದಿನಗಳ ಬಳಿಕ ಯುವಕನ ಶವ ಪತ್ತೆಯಾಗಿದೆ. ಯುವಕ ನೀರು ಪಾಲಾಗಿರುವ ಸ್ಥಳದಿಂದ 200 ಮೀಟರ್ ದೂರದಲ್ಲಿ ರಾಮುವಿನ ಮೃತ ದೇಹ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ತಾಲೂಕಿನ ಮಾಚನೂರಲ್ಲಿ ಈ ಒಂದು ಘಟನೆ ನಡೆದಿತ್ತು. ಇನ್ನು ಮತ್ತೊಬ್ಬನ ಯುವಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.ಸ್ಥಳಕ್ಕೆ SDRF ಮತ್ತು ಅಗ್ನಿಶಾಮಕ ದಳ ಹಾಗೂ ನುರಿತ ಮೀನುಗಾರರಿಂದ ಶೋಧ ಕಾರ್ಯ ನಡೆಯುತ್ತಿದೆ.