Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

08/04/2026 8:33 PM

ವಿಮಾನಯಾನ ಸಂಸ್ಥೆಗಳಿಗೆ ಬಂಪರ್ ಕೊಡುಗೆ: ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕದಲ್ಲಿ ಶೇ. 25 ರಷ್ಟು ಕಡಿತ!

08/04/2026 8:30 PM

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

08/04/2026 8:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ
KARNATAKA

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

By kannadanewsnow5711/12/2025 6:30 AM

ಬೆಂಗಳೂರು : ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು ಎಂದು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2025ನ್ನು ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ ಕಲಂ-3 ರ ಉಪ ಕಲಂ (2) ರ ಖಂಡ (ಎ) ರಲ್ಲಿ ಅಗತ್ಯಪಡಿಸಿರುವಂತೆ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯ ಭಾಗ-IVA (ಸಂಖ್ಯೆ: 659) ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗಲು ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದೆ.

ಸದರಿ ವಿಶೇಷ ರಾಜ್ಯಪತ್ರವನ್ನು ದಿನಾಂಕ: 17.10.2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;ಮತ್ತು ಸದರಿ ಕರಡು ತಿದ್ದುಪಡಿ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿದೆ.

ಈಗ ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಿಕೊಂಡು 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡಂತೆ ನಿಯಮಗಳನ್ನು ರಚಿಸುತ್ತದೆ.

ನಿಯಮಗಳು

ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು

(ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಯಾಗತಕ್ಕದ್ದು.

ಕೋಷ್ಟಕದ ತಿದ್ದುಪಡಿ: ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ

ಇಲಾಖೆ) (ನೇಮಕಾತಿ) ನಿಯಮಗಳು, 1967ರ ಕೋಷ್ಟಕದಲ್ಲಿ “ಶ್ರೇಣಿ ॥ ಪತ್ರಾಂಕಿತವಲ್ಲದ ಹುದ್ದೆಗಳು” ಶೀರ್ಷಿಕೆಯಡಿಯಲ್ಲಿ ಕ್ರಮ ಸಂಖ್ಯೆ: 66 ರಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿ 1 ರಿಂದ 5 ವರ್ಗದ ಅಂಕಣ ಸಂಖ್ಯೆ (3) ರಲ್ಲಿ :-

ಪ್ರಸ್ತುತ ಇರುವ ಟಿಪ್ಪಣಿಯನ್ನು ಟಿಪ್ಪಣಿ-1 ಎಂದು ಸಂಖ್ಯಿಕರಿಸುವುದು: ಮತ್ತು

ಅದರಂತೆ ಸಂಖ್ಯಿಕರಿಸಿದ ಟಿಪ್ಪಣಿ-1 ರ ನಂತರ ಈ ಕೆಳಗಿನಂತೆ ಸೇರ್ಪಡೆಗೊಳಿಸತಕ್ಕದ್ದು. ಅಂದರೆ,

“ಟಿಪ್ಪಣಿ-2 1 ರಿಂದ 5ನೇ ತರಗತಿಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು NCTE ಮಾರ್ಗಸೂಚಿಗಳಲ್ಲಿ ನಿರ್ಧಿಷ್ಟಪಡಿಸಿದಂತೆ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿರುವಂತೆ ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದಲ್ಲಿ, 6 ಮತ್ತು 7 ನೇ ತರಗತಿಗೆ ಬೋಧಿಸಲು ಅರ್ಹರಾಗತಕ್ಕದ್ದು.

BIG NEWS: Teachers with degrees in essential subjects are eligible to teach classes 6th and 7th: State government publishes gazette notification
Share. Facebook Twitter LinkedIn WhatsApp Email

Related Posts

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

08/04/2026 8:33 PM1 Min Read

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

08/04/2026 8:29 PM1 Min Read

ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಅಧಿಕಾರಿಗಳೇ ಜವಾಬ್ದಾರರು: ಜಿಪಂ ಸಿಇಒಗಳಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

08/04/2026 8:25 PM2 Mins Read
Recent News

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

08/04/2026 8:33 PM

ವಿಮಾನಯಾನ ಸಂಸ್ಥೆಗಳಿಗೆ ಬಂಪರ್ ಕೊಡುಗೆ: ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕದಲ್ಲಿ ಶೇ. 25 ರಷ್ಟು ಕಡಿತ!

08/04/2026 8:30 PM

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

08/04/2026 8:29 PM

ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಅಧಿಕಾರಿಗಳೇ ಜವಾಬ್ದಾರರು: ಜಿಪಂ ಸಿಇಒಗಳಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

08/04/2026 8:25 PM
State News
KARNATAKA

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

By kannadanewsnow0908/04/2026 8:33 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ತಾಲೂಕಿನ ಆನಂದಪುರ ಸಮೀಪದ ಆಚಾಪುರ ಬಳಿ ಇರುವ ‘ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್’ ಆವರಣದಲ್ಲಿ ಅಕ್ರಮವಾಗಿ ಮರಳು…

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

08/04/2026 8:29 PM

ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಅಧಿಕಾರಿಗಳೇ ಜವಾಬ್ದಾರರು: ಜಿಪಂ ಸಿಇಒಗಳಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

08/04/2026 8:25 PM

ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕದ ಸ್ಥಾನ ಮತ್ತಷ್ಟು ಭದ್ರ: ಸಚಿವ ಪ್ರಿಯಾಂಕ್ ಖರ್ಗೆ

08/04/2026 8:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.